Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನವೆಂಬರ್ 10 ರವರೆಗೆ ಕಾದು ನೋಡಿ ಬಿಜೆಪಿಯಲ್ಲಿ ಏನಾಗುತ್ತೆ ಅಂತ – ಜಮೀರ್ ಅಹಮ್ಮದ್

ವಿಜಯನಗರ : ರಾಜ್ಯ ಬಿಜೆಪಿಯಲ್ಲಿ ಏನಾಗಲಿದೆ ನವೆಂಬರ್ 10 ರವರೆಗೂ ಕಾದು ನೋಡಿ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ. ವಿಜಯನಗರ ಪ್ರವಾಸದಲ್ಲಿರುವ ಸಚಿವರು ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿಯವರು ಏನೇ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಸರ್ಕಾರಕ್ಕೆ ಏನೂ ಆಗದು. 65 ಶಾಸಕರನ್ನು ಇಟ್ಟುಕೊಂಡು ಹಗಲು ಕನಸು ಕಾಣುತ್ತಿದ್ದಾರೆ ಎಂದು ವಸತಿ ಸಚಿವರು ಲೇವಡಿ ಮಾಡಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮೊದಲು ಬಿಜೆಪಿ ಶಾಸಕರನ್ನು ಹಿಡಿದು ಇಟ್ಟುಕೊಳ್ಳಲಿ. ಕಾಂಗ್ರೆಸ್‌ನ ಒಬ್ಬ ಶಾಸಕ ಸಹ ಹೋಗಲ್ಲ. ಇನ್ನೊಂದು ವಾರ ಹತ್ತು ದಿನ ನೋಡಿ ಹೇಗೆ ಸ್ಫೋಟ ಆಗುತ್ತೆ. ಕಾಂಗ್ರೆಸ್‌ನಲ್ಲಿ ಯಾವುದೇ ಬಣ ಇಲ್ಲ, ನಮ್ಮದು ಒಂದೇ ಬಣ ಅದು ಕಾಂಗ್ರೆಸ್ ಬಣ ಎಂದರು.