Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಾನು ಇನ್ನೂ ಸಿಂಗಲ್ ಎಂದು ಸ್ಪಷ್ಟನೆ ನೀಡಿದ ನಟಿ ರುಕ್ಮಿಣಿ

ಸಪ್ತ ಸಾಗರದಾಚೆ ಎಲ್ಲೋ ಸಿನೆಮಾ ಬಂದ ಮೇಲಂತೂ ನಟಿ ರುಕ್ಮಿಣಿ ವಸಂತ್ ಕರ್ನಾಟಕದ ಹೊಸ ಕ್ರಶ್ ಆಗಿ ಬದಲಾಗಿದ್ದಾರೆ.ಅವರ ಸರಳವಾದ ಸೌಂದರ್ಯ, ಸಂಯಮದ ನಟನೆಗೆ ಕನ್ನಡ ಪ್ರೇಕ್ಷಕರು ಮಾರು ಹೋಗಿದ್ದಾರೆ. ಅದೆಷ್ಟೋ ಹುಡುಗರ ಮೊಬೈಲ್ ವಾಲ್ ಪೇಪರ್ ಕೂಡ ರುಕ್ಮಿಣಿ ವಸಂತ್ ಆಗಿದ್ದಾರೆ.

ಆದ್ರೆ ಪುಟ್ಟಿಗೆ ಲವ್ವರ್ ಇದ್ದರಾ ಅನ್ನೋ ಪ್ರಶ್ನೆ ಮಾತ್ರ ರುಕ್ಮಿಣಿ ಫ್ಯಾನ್ಸಲ್ಲಿ ಕಾಡ್ತಿತ್ತು. ಯಾಕಂದ್ರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ವೈರಲ್ ಆಗಿತ್ತು. ಆ ಫೋಟೋ ನೋಡಿ ರಕ್ಷಿತ್ ಫ್ಯಾನ್ಸ್ ನಿರಾಸೆಗೆ ಒಳಗಾಗಿದ್ರು.

ಹೌದು ಯುವಕನೊಬ್ಬನೊಟ್ಟಿಗೆ ರುಕ್ಮಿಣಿ ಆತ್ಮೀವಾಗಿ ಕಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಚಿತ್ರಕ್ಕೆ ರುಕ್ಮಿಣಿ ಕೂಡ “ಐ ಲವ್ ಯೂ” ಅಂತ ಪ್ರತಿಕ್ರಿಯೆ ನೀಡಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು.

ಇದೀ ಈ ಸುದ್ದಿಗೆ ಸ್ವತಃ ರುಕ್ಮಿಣಿ ವಸಂತ್ ಪ್ರತಿಕ್ರಿಯೆ ನೀಡಿದ್ದು, ಆ ವೈರಲ್ ಆಗಿರುವ ಚಿತ್ರದಲ್ಲಿರುವುದು ನನ್ನ ಗೆಳೆಯ, ನಾನು ಇನ್ನೂ ಸಿಂಗಲ್ ಎಂದು ಸ್ಪಷ್ಟನೆ ನೀಡಿದ್ದಾರೆ.

ಹೊಸಬಳಾಗಿದ್ದರೂ ನನ್ನ ಸಿನಿಮಾಗಳ ಬಗ್ಗೆ, ನನ್ನ ಖಾಸಗಿ ಜೀವನದ ಬಗ್ಗೆ ಜನ ಕೇರ್ ಮಾಡುತ್ತಿರುವುದು ಖುಷಿ ಆಗುತ್ತದೆ. ಇದೇ ಸಮಯದಲ್ಲಿ ಸುಳ್ಳು ಸುದ್ದಿಗಳು, ನೆಗೆಟಿವ್ ಕಮೆಂಟ್​ಗಳು ಬೇಸರವನ್ನು ತರಿಸುತ್ತವೆ” ಎಂದಿದ್ದಾರೆ.

ಈ ಮಾತುಗಳನ್ನು ಸ್ವತಃ ರುಕ್ಮಿಣಿ ವಸಂತ್ ಬಾಯಾರೆ ಕೇಳಿ ರಕ್ಷಿತ್ ಶೆಟ್ಟಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ನಿಜ ಜೀವನದಲ್ಲೂ ರಕ್ಷಿತ್-ರುಕ್ಮಿಣಿ ಒಂದಾಗಲಿ ಅಂತ ಮನಸಾರೆ ಹಾರೈಸುತ್ತಿದ್ದಾರೆ.