Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಾನು ಧರಿಸಿದ್ದು ಪೆಂಡೆಂಟ್ ಹುಲಿ ಉಗುರಲ್ಲ, ಸಿಂಥೆಟಿಕ್ ಎಂದ ರಜತ್ ಉಳಾಗಡ್ಡಿಮಠ

ಹುಬ್ಬಳ್ಳಿ: ರಾಜ್ಯದಲ್ಲಿ ಹುಲಿ ಉಗುರು ಮಾದರಿ‌ ಪೆಂಡೆಂಟ್ ಇದೀಗ ಭಾರಿ ಚರ್ಚೆ ಗ್ರಾಸವಾಗಿದೆ. ಸೆಲೆಬ್ರಿಟಿಗಳ ಕೊರಳಿನಲ್ಲಿ ರಾರಾಜಿಸುತ್ತಿದ್ದ ಪೆಂಡೆಂಡ್‌ಗಳು ಈಗ ಕಂಟಕ ತಂದಿವೆ.‌ ಇನ್ನು ಅದೇ ವಿಚಾರಕ್ಕೆ ಹುಬ್ಬಳ್ಳಿಯ ಕಾಂಗ್ರೆಸ್‌ನ ಯುವ ಮುಖಂಡ ಹುಲಿ ಉಗುರು ಧರಸಿದ ಫೋಟೋ ಒಂದು ವೈರಲ್ ಆಗಿತ್ತಿದೆ. ಹೌದು. ಹುಲಿ ಉಗುರು ಮಾದರಿಯನ್ನು ಕಾಂಗ್ರೆಸ್ ಯುವ ನಾಯಕ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಅಳಿಯ ರಜತ್ ಉಳ್ಳಾಗಡ್ಡಿಮಠ ಧರಿಸಿರುವ ಫೋಟೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ.‌ ರಜತ್ ಉಳ್ಳಾಗಡ್ಡಿಮಠ ಅವರು ಮದುವೆ ಸಮಯದಲ್ಲಿ ಫೋಟೋ ಶೂಟ್‌ನಲ್ಲಿ ಹುಲಿ ಉಗುರು ಮಾದರಿ ಚೈನ್ ಧರಿಸಿದ್ದರು. ಈ ಫೋಟೋ ಸದ್ಯ ವೈರಲ್ ಆಗಿದ್ದರ ಬಗ್ಗೆ ಪ್ರತಿಕ್ರಿಯೆ ‌ನೀಡಿದ್ದು, ಇದು ಹುಲಿ ಉಗುರು ಅಲ್ಲ. ಸಿಂಥೆಟಿಕ್ ಮಾದರಿಯ ಹುಲಿ ಉಗುರು. ಮದುವೆ ಸಮಯದಲ್ಲಿ ಫೋಟೋ ಶೂಟ್‌ಗಾಗಿ ಬಳಸಿದ್ದೆ. ಅದು ಈಗ ವೈರಲ್ ಆಗಿದೆ. ಆದ್ರೆ ಇಲ್ಲಿಯವರೆಗೂ ಅರಣ್ಯ ಅಧಿಕಾರಿಗಳಾಗಲಿ,‌ ಪೊಲೀಸರಾಗಲಿ ಮಾಹಿತಿ ಕೇಳಿಲ್ಲ. ಅದರ ಜೊತೆಗೆ ನೋಟೀಸ್ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.