‘ನಾನು ಸಿಎಂ ಹುದ್ದೆ ಬಿಟ್ಟರೂ ಆ ಹುದ್ದೆ ನನ್ನನ್ನು ಬಿಡೋದಿಲ್ಲ’ – ಅಶೋಕ್ ಗೆಹ್ಲೋಟ್
ನವದೆಹಲಿ: ನಾನು ಸಿಎಂ ಹುದ್ದೆ ಬಿಟ್ಟರೂ ಆ ಹುದ್ದೆ ನನ್ನನ್ನು ಬಿಡೋದಿಲ್ಲ. ಹೀಗಾಗಿ ನಾನು ಸಿಎಂ ಆಗಿ ಮುಂದುವರೆದಿದ್ದೇನೆ. ಹೊರತು ಆ ಹುದ್ದೆಯಲ್ಲಿ ಇರಲೇಬೇಕೆಂಬ ಅನಿವಾರ್ಯತೆ ನನಗಿಲ್ಲ. ಅದಕ್ಕಾಗಿ ಆಸೆಪಟ್ಟವನಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಿಎಂ ಅಭ್ಯರ್ಥಿ ಎಂದು ನನ್ನ ಹೆಸರನ್ನು ಎಲ್ಲಿಯೂ ಹೇಳಿಲ್ಲ. ನಾನು ಕೂಡ ಸಿಎಂ ಆಗುತ್ತೇನೆಂದು ಅಂದುಕೊಂಡಿರಲಿಲ್ಲ. ಆದರೆ ಸೋನಿಯಾ ಗಾಂಧಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಆದ ಮೇಲೆ ಅವರು ಕೈಗೊಂಡ ಮೊದಲ ನಿರ್ಧಾರವೇ ನನ್ನನ್ನು ಸಿಎಂ ಮಾಡುವುದಾಗಿತ್ತು ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.