Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಾಪತ್ತೆಯಾಗಿದ್ದ ಹೈದರಬಾದ್ ಮೂಲದ ವಿದ್ಯಾರ್ಥಿ ಅಮೆರಿಕದ ಕ್ಲೀವ್ಲ್ಯಾಂಡ್ ನಗರದಲ್ಲಿ ಪತ್ತೆ.!

 

ನ್ಯೂಯಾರ್ಕ್: ಇದು ಅಮೆರಿಕದಲ್ಲಿ ಒಂದು ವಾರದೊಳಗೆ ನಡೆದ ಭಾರತೀಯ ವಿದ್ಯಾರ್ಥಿಯ ಎರಡನೇ ಸಾವಿನ ಪ್ರಕರಣವಾಗಿದೆ.

ಕಳೆದ ತಿಂಗಳು ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಅರಾಫತ್ ಅವರ ಮೃತದೇಹ ಅಮೆರಿಕದ ಕ್ಲೀವ್ಲ್ಯಾಂಡ್ ನಗರದಲ್ಲಿ ಪತ್ತೆಯಾಗಿದೆ.

ಹೈದರಾಬಾದ್ನ ನಾಚರಾಮ್ ಮೂಲದ 25 ವರ್ಷದ ಮೊಹಮ್ಮದ್ ಅಬ್ದುಲ್ ಅರಾಫತ್ ಕಳೆದ ವರ್ಷ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಅವರು ಕ್ಲೀವ್ಲ್ಯಾಂಡ್ ಯುನಿವರ್ಸಿಟಿಯಲ್ಲಿ ಐಟಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದರು.

ಭಾರತೀಯ ವಿದ್ಯಾರ್ಥಿಯ ಹುಡುಕಾಟದ ವೇಳೆ ಓಹಿಯೋದ ಕ್ಲೀವ್ಲ್ಯಾಂಡ್ನಲ್ಲಿ ಮೃತದೇಹ ಪತ್ತೆಯಾಗಿದೆ. ಅಲ್ಲದೆ ಅಂತ್ಯಕ್ರಿಯೆಗಾಗಿ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.!