Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಾಲ್ವರು ಉಗ್ರರರಿಂದ ಒಳನುಸುಳಲು ಯತ್ನ: ಓರ್ವ ಉಗ್ರನ ಹತ್ಯೆ

ನವದೆಹಲಿ:ಭಾರತೀಯ ಸೇನೆಯ ಮೇಲೆ ಸಶಸ್ತ್ರ ದಾಳಿ ನಡೆಸಿದ ಕೆಲವೇ ದಿನಗಳಲ್ಲಿ, ಶನಿವಾರ ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ನಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ನಾಲ್ವರು ಭಯೋತ್ಪಾದಕರಲ್ಲಿ, ಓರ್ವನನ್ನು ಭದ್ರತಾ ಪಡೆಯ ಸಿಬ್ಬಂದಿಗಳು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಅಖ್ನೂರ್ನ ಖೌರ್ ಸೆಕ್ಟರ್ನಲ್ಲಿರುವ ಐಬಿಯಿಂದ ನಾಲ್ವರು ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ಈ ಕಡೆಗೆ ನುಸುಳಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದಾಗ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಳನುಸುಳುತ್ತಿದ್ದ ಭಯೋತ್ಪಾದಕರ ಮೇಲೆ ಸೇನಾ ಪಡೆ ಗುಂಡಿನ ದಾಳಿ ನಡೆಸಿ ಓರ್ವ ಉಗ್ರರ ಹತ್ಯೆ ನಡೆಸಿದ್ದಾರೆ.

ಮೃತ ಉಗ್ರರನ ಶವವನ್ನು ಆತನ ಸಹಚರರು ಎಳೆದೊಯ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದಕ್ಕೂ ಮುನ್ನ ಗುರುವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಹೊಂಚುದಾಳಿ ನಡೆಸಿದ್ದರಿಂದ ಕನಿಷ್ಠ ನಾಲ್ವರು ಯೋಧರು ಮೃತಪಟ್ಟು ಮೂವರು ಗಾಯಗೊಂಡಿದ್ದರು.

ಇಲ್ಲಿನ ಠಾಣಮಂಡಿ-ಸುರನಕೋಟೆ ರಸ್ತೆಯ ಸಾವನಿ ಪ್ರದೇಶದಲ್ಲಿ ಸೇನಾ ವಾಹನಗಳ ಮೇಲೆ ಈ ದಾಳಿ ನಡೆದಿದ್ದು ವಾಹನವು ಬುಧವಾರ ಭಯೋತ್ಪಾದಕರ ವಿರುದ್ಧ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿರುವ ಬಫ್ಲಿಯಾಜ್ ಪ್ರದೇಶದಿಂದ ಜವಾನರನ್ನು ಹೊತ್ತೊಯ್ಯುತ್ತಿತ್ತು.