ನಾಳೆಯಿಂದ ಮಂಗಳೂರು – ಮಡಗಾಂವ್ ವಂದೇ ಭಾರತ್ ರೈಲು ಆರಂಭ
ಮಂಗಳೂರು: ಮಂಗಳೂರು ಹಾಗೂ ಮಡಗಾಂವ್ ಮಧ್ಯೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಈಗಾಗಲೇ ನಡೆದಿದ್ದು, ಯಶಸ್ವಿಯಾಗಿ ಪೂರೈಸಿದೆ. ಡಿ 30 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರು ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ 6 ವಂದೇ ಭಾರತ್ ರೈಲುಗಳಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆಯನ್ನು ನೀಡಲಿದ್ದಾರೆ.
ರೈಲಿನ ಆರಂಭಿಕ ಸಂಚಾರಕ್ಕೆ ದಕ್ಷಿಣ ರೈಲ್ವೆ ವಲಯವು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಂದೇ ಭಾರತ್ ಎಕ್ಸ್ ಪ್ರೆಸ್ ಮಂಗಳೂರು ಮಡಗಾಂವ್ ರೈಲು 320 ಕಿಮೀ ಓಡಾಟ ಮಾಡಿದ್ದು, ಯಾವುದೇ ಸಮಸ್ಯೆಗಳು ಆಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ಮಡಗಾಂವ್ ಸಂಚಾರದ ನಡುವೆ ಉಡುಪಿ ಮತ್ತು ಕಾರವಾರದಲ್ಲಿ ಎರಡು ನಿಲುಗಡೆಗಳು ಇರಲಿವೆ.