ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾ‌ನಗೊಂಡು ರಾಜೀನಾಮೆಯನ್ನು ನೀಡಿ, ಮುಂಬೈ ಸೇರಿರುವ ಶಾಸಕರನ್ನು ಭೇಟಿ ಮಾಡಲು , ಅವರ ಮನವೊಲಿಸಿ ಅವರನ್ನು ಕರೆ ತರಲು ನಾಳೆ ಮುಂಬೈಗೆ ಹೋಗುತ್ತಿರುವುದಾಗಿ ಹೇಳಿದ್ದಾರೆ ಡಿ.ಕೆ.ಶಿವಕುಮಾರ್ ಅವರು. ಅವರು ಮಾತನಾಡುತ್ತಾ ಬಿಜೆಪಿ ಈಗಾಗಲೇ ಆಪರೇಷನ್ ಕಮಲವನ್ನು ಆರಂಭಿಸಿದೆಯಾದರೂ ಬಿಜೆಪಿ ಶಾಸಕರು ಮಾತ್ರ ತಮಗೇನು ತಿಳಿದಿಲ್ಲ ಎಂಬಂತೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಆದ ಕಾರಣ ನಾಳೆ ಮುಂಬೈಗೆ ಹೋಗಿ ಮುನಿಸಿಕೊಂಡಿರುವ ಶಾಸಕರ ಜೊತೆ ಮಾತನಾಡಲಿದ್ದೇನೆ ಎಂದಿದ್ದಾರೆ.

ಈಗ ಅಸಮಾಧಾನಗೊಂಡಿರುವ ಶಾಸಕರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು. ಪಕ್ಷ ತೊಂದರೆಯಲ್ಲಿದ್ದಂತಹ ಸಂದರ್ಭದಲ್ಲಿ ಪಕ್ಷಕ್ಕೆ ಬೆಂಬಲವಾಗಿ ನಿಂತವರು. ಅಂತಹ ಉತ್ತಮ ಕೆಲಸ ಮಾಡಿದವರು ಇಂದು ಅಸಮಾಧಾ‌ನ ಮಾಡಿಕೊಂಡಿದ್ದಾರೆ, ಆದ್ದರಿಂದಲೇ ಅವರ ಜೊತೆ ಮಾತನಾಡಿ , ಅವರ ಅಸಮಾಧಾನಕ್ಕೆ ಕಾರಣವೇನೆಂಬುದನ್ನು ತಿಳಿಸಿ, ಅವರ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಡಿಕೆಶಿ ಅವರು ಮಾದ್ಯಮಗಳಿಗೆ ತಿಳಿಸಿದ್ದೇವೆ. ಸೋಮಶೇಖರ್ ಅವರು ಪಕ್ಷಕ್ಕಾಗಿ ನುಡಿದಿದ್ದಾರೆ, ಅವರೊಂದಿಗೆ ಖಾಸಗಿಯಾಗಿ ಮಾತನಾಡಬೇಕಿದೆ ಎಂದಿದ್ದಾರೆ.

ಇದೇ ಸಂದರ್ಭ ಅವರು ರಿವರ್ಸ್ ಆಪರೇಷನ್ ಬಗ್ಗೆ ಕೂಡಾ ಮಾತನಾಡಿದ್ದು, ಯಾರು ಏನಾದರೂ ಮಾಡಲಿ, ಆದರೆ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾತ್ರ ಎಂದಿಗೂ ಫಲ‌ ನೀಡುವುದಿಲ್ಲ ‌ಎಂದು ಹೇಳಿದ್ದಾರೆ. ಶಾಸಕ ಸ್ಥಾನದಲ್ಲಿರುವ ಎಲ್ಲಾ 224 ಮಂದಿಯೂ ಕೂಡಾ ನನಗೆ ಸ್ನೇಹಿತರೇ ಎಂದಿದ್ದು, ನನ್ನ ಬಳಿ ಬರುವ ಎಲ್ಲರ ಜೊತೆ ನಾನು ಅಭಿವೃದ್ಧಿ ಬಗ್ಗೆ‌ ಮಾತನಾಡುತ್ತೇನೆಯೇ ಹೊರತು, ನಾನೆಂದು ರಾಜಕೀಯ ಮಾಡುವುದಿಲ್ಲ ಎಂದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here