ನಿಜಗುಣಾನಂದ ಸ್ವಾಮೀಜಿಯ ಎದೆ ಢವ ಢವ!
ಬಸವಕಲ್ಯಾಣ: ಬಸವಣ್ಣನವರ ವೈಚಾರಿಕತೆ ಹೇಳುವ ಬಾಯಿಯನ್ನು ಮುಚ್ಚಿಸಲಾಗುತ್ತಿದ್ದು, ಏನಾದರೂ ಹೇಳಬೇಕೆಂದರೆ ಎದೆ ಢವ ಢವ ಎನ್ನುತ್ತಿದೆ ಎಂದು ನಿಜಗುಣಾನಂದ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ಬಸವಕಲ್ಯಾಣದಲ್ಲಿ ಮಾತನಾಡಿ, ಲಿಂಗಾಯತರಲ್ಲಿ ಗಣೇಶನ ಪೂಜೆ ಇಲ್ಲ ಎಂದು ಹೇಳಿದ್ದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರನ್ನು ವಿರೋಧಿಸುತ್ತಿದ್ದಾರೆ. ಕಲ್ಲು ದೇವರಲ್ಲ ಎಂದಿದ್ದಕ್ಕೆ MM ಕಲಬುರ್ಗಿಯವರ ಹತ್ಯೆ ಮಾಡಲಾಯಿತು. ಹೀಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದಿದ್ದಾರೆ.