Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಿನ್ನೆ ಭರಮಸಾಗರದಲ್ಲಿ 8.4 ಮಿ.ಮೀ ಮಳೆ

 

ಚಿತ್ರದುರ್ಗ: ಬುಧವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದಲ್ಲಿ 8.4 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 2.2 ಮಿ.ಮೀ, ಚಿತ್ರದುರ್ಗ-2ರಲ್ಲಿ 1.1 ಮಿ.ಮೀ,  ಸಿರಿಗೆರೆ 5 ಮಿ.ಮೀ, ಐನಹಳ್ಳಿ 1.2 ಮಿ.ಮೀ, ಹಿರೇಗುಂಟನೂರು 1 ಮಿ.ಮೀ,  ಮಳೆಯಾಗಿದೆ.

ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ 3.2 ಮಿ.ಮೀ, ದೇವಸಮುದ್ರ 1.4 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 2.4 ಮಿ.ಮೀ, ರಾಮಗಿರಿ 3.4 ಮಿ.ಮೀ, ಚಿಕ್ಕಜಾಜೂರು 4.6 ಮಿ.ಮೀ, ಬಿ. ದುರ್ಗ 7.2 ಮಿ.ಮೀ, ಹೆಚ್‍ಡಿ ಪುರ 4.2 ಮಿ.ಮೀ, ತಾಳ್ಯ 3 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 4.2 ಮಿ.ಮೀ, ಶ್ರೀರಾಂಪುರ 2 ಮಿ.ಮೀ, ಮಾಡದಕೆರೆ 8.2 ಮಿ.ಮೀ, ಬಾಗೂರು 4.1 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 2.2 ಮಿ.ಮೀ, ಬಬ್ಬೂರು 1.6 ಮಿ.ಮೀ, ಇಕ್ಕನೂರು 1.6 ಮಿ.ಮೀ, ಈಶ್ವರಗೆರೆ 1.6 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ 2.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.