????????????????????”ಮನುಷ್ಯನ ದೇಹದ ಬಗ್ಗೆ 24 ವಿಚಿತ್ರ ಸತ್ಯಗಳು”????????????????????

“ಮೂಳೆಗೆ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ”.

1. ಗಂಡಸರಿಗೆ ದಿನಕ್ಕೆ 40 ಕೂದಲು ಉದುರಿದರೆ ಹೆಂಗಸರಿಗೆ 70 ಉದುರುತ್ತೆ

2. ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದ ಸಿಗಲ್ಲ

3. ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ

4. ಸಾಮಾನ್ಯವಾಗಿ ನಾವು ದಿನಕ್ಕೆ 6 ಸಲಿ ಬಚ್ಚಲುಮನೆಗೆ ಹೋಗ್ತೀವಿ.

5. ನಾಲಿಗೆಯ ಟೇಸ್ಟ್ ಬಡ್ಸ್ ಜೀವಾವಧಿ ಸುಮಾರು 10 ದಿನ ಮಾತ್ರ. ನಂತರ ಬೇರೆ ಹುಟ್ಟುತ್ತವೆ.

6. ವಸಂತ ಋತುವಿನಲ್ಲಿ ಮಕ್ಕಳು ಹೆಚ್ಚು ಬೆಳೀತಾರೆ.

7. ಸೀನಿದಾಗ ದೇಹದ ಎಲ್ಲಾ ಕ್ರಿಯೆಗಳೂ ತಾತ್ಕಾಲಿಕವಾಗಿ ನಿಲ್ಲುತ್ತವೆ. ಎದೆ ಕೂಡ ಬಡಿದುಕೊಳ್ಳಲ್ಲ.

8. ತಲೆಬುರುಡೆಯಲ್ಲಿ 26 ಬೇರೆಬೇರೆ ಮೂಳೆಗಳಿರುತ್ತವೆ

9. ಬಿಸಿಲಲ್ಲಿ ಕೈ ಸುಡುತ್ತಿದ್ದರೆ ನಿಮ್ಮ ದೇಹದಲ್ಲಿ ಸಾಕಷ್ಟು ನೀರಿಲ್ಲ ಅಂತ ಅರ್ಥ. ಚೆನ್ನಾಗಿ ನೀರು ಕುಡಿಯಿರಿ ಕುಡೀರಿ!

10. ಹೆಚ್ಚು ಉಪ್ಪು ತಿನ್ನುವುದರಿಂದ ಎಲ್ಲಾ ರೀತಿಯ ರೋಗಗಳು ಬರುತ್ತವೆ

ಸಕ್ಕರೆ ಖಾಯಿಲೆ, ಶ್ವಾಸಕೋಶ ಮತ್ತು ಕಿಡ್ನಿ ಸಮಸ್ಯೆಗಳು…

11. ಮನುಷ್ಯನ ದೇಹದಲ್ಲಿ ಸರಾಸರಿ 10,000 ಕೋಟಿ ನರಕೋಶ (ನರ್ವ್ ಸೆಲ್ಸ್) ಇರುತ್ತೆ

12. ಬೇಯಿಸದ ಅಡುಗೆ (ಉದಾ: ಕೋಸಂಬರಿ) ಬೇಯಿಸಿದ ಅಡುಗೆಗಿಂತ ಎರಡರಷ್ಟು ಬೇಗ ಅರಗುತ್ತದೆ

13. ಮಂಡಿಚಿಪ್ಪು (ನೀ ಕ್ಯಾಪ್) ಹುಟ್ಟುತ್ತಲೇ ಇರೋದಿಲ್ಲ. 2-6 ವರ್ಷ ಆಗುವಷ್ಟರಲ್ಲಿ ಬೆಳೆಯುತ್ತದೆ.

14. ಹೃದಯ ದಿನಕ್ಕೆ ಸುಮಾರು 1,000 ಸಲ ರಕ್ತವನ್ನು ಸುತ್ತು ಹಾಕಿಸುತ್ತದೆ

15. ನಮ್ಮ ಮೂಳೆಗಳಿಗೆ ಮನೆ ಕಟ್ಟಕ್ಕೆ ಬಳಸುವ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ

16. ತಿಂದಿದ್ದು ಬಾಯಿಂದ ಹೊಟ್ಟೆ ಒಳಗೆ ಹೋಗಕ್ಕೆ 7 ಸೆಕೆಂಡ್ ತೊಗೊಳ್ಳುತ್ತೆ

17. ನಮಗೆ ಹುಟ್ಟಿದಾಗ 300 ಮೂಳೆಗಳಿರುತ್ತವೆ. ದೊಡ್ಡವರಾಗುತ್ತಿದ್ದಂತೆ ಅದು 206 ಆಗುತ್ತದೆ.

18. ಒಂದು ಕಣ್ಣಿನ ರೆಪ್ಪೆ ಸುಮಾರು 5 ತಿಂಗಳಿರುತ್ತದೆ. ಆಮೇಲೆ ಉದುರಿ ಹೋಗುತ್ತದೆ.

19. ಎರಡು ಹುಬ್ಬೂ ಸೇರಿದರೆ ಸುಮಾರು 1,000 ಕೂದಲಿರುತ್ತೆ

20. ಕಿವಿಯಲ್ಲಿ ದೇಹದ ಅತ್ಯಂತ ಚಿಕ್ಕ ಮೂಳೆಯಿರುತ್ತದೆ

21. ಮಕ್ಕಳ ನಾಲಿಗೆಯಲ್ಲಿ ದೊಡ್ಡೋರಿಗಿಂತ ಜಾಸ್ತಿ ಟೇಸ್ಟ್ ಬಡ್ಸ್ ಇರುತ್ತವೆ

22. ರಾತ್ರಿಗಿಂತ ಬೆಳಗ್ಗೆ ನಮ್ಮ ಉದ್ದ ಜಾಸ್ತಿಯಿರುತ್ತೆ

23. ವಯಸ್ಸಾಗುತ್ತಿದ್ದ ಹಾಗೆ ಕಣ್ಣು ದೊಡ್ಡದಾಗೋದಿಲ್ಲ. ಆದರೆ ಕಿವಿ ಮತ್ತು ಮೂಗು ಆಗುತ್ತಲೇ ಇರುತ್ತವೆ.

24. ಉಗುರು ಮತ್ತು ಕೂದಲು ಎರಡೂ ಒಂದೇ ವಸ್ತುವಿನಿಂದ ಕೂಡಿರುತ್ತವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here