ನಿಮ್ಮ ಹಲ್ಲುಗಳ ಹಾರೈಕೆ ಹೀಗೆ ಇರಲಿ.! ಈ ಪಾದಾರ್ಥಗಳಿಂದ ದೂರವಿರಿ.?
ಹಲ್ಲುಗಳು ಸುಂದರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಹಲ್ಲಿನ ಸಮಸ್ಯೆ ಎದುರಿಸಬೇಕಾಗಿದೆ. ನಮ್ಮ ಆಹಾರ ಪದ್ಧತಿ ಹಲ್ಲನ್ನು ಹಾಳು ಮಾಡ್ತಿದೆ. ಸುಂದರ ಹಾಗೂ ಸದೃಢ ಹಲ್ಲು ಬಯಸುವವರು ಕೆಲ ಆಹಾರದಿಂದ ದೂರವಿರಬೇಕು.
ಕಪ್ ಕೇಕ್, ಡೊನಟ್ಸ್ ನಂತಹ ಸಕ್ಕರೆ ಆಹಾರ ಪದಾರ್ಥಗಳು ಹಲ್ಲುಗಳ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟುಮಾಡುತ್ತವೆ. ಹಲ್ಲು ಹುಳುಕಾಗಲು ಹಾಗೂ ದುರ್ಬಲಗೊಳ್ಳಲು ಇದು ಕಾರಣವಾಗುತ್ತದೆ.
ಸೋಡಾ, ಸಿಹಿ ಪಾನೀಯಗಳು, ಎನರ್ಜಿ ಡ್ರಿಂಕ್ಸ್ ಅಥವಾ ಕಾಫಿ ಹಲ್ಲನ್ನು ಹಾಳು ಮಾಡುತ್ತದೆ. ಬೊಜ್ಜು, ಹೃದ್ರೋಗಗಳು ಮತ್ತು ಇನ್ಸುಲಿನ್ ನಿರೋಧಕದಂತಹ ಸಮಸ್ಯೆಗಳನ್ನೂ ಇವು ಉಂಟುಮಾಡುತ್ತದೆ. ತಂಪು ಪಾನೀಯಗಳು ಬ್ಯಾಕ್ಟೀರಿಯಾಗಳು ಬೆಳೆಯಲು ಕಾರಣವಾಗುತ್ತವೆ. ಹಲ್ಲಿನ ಹೊರ ಪದರವನ್ನು ಹಾನಿಗೊಳಿಸುತ್ತವೆ. ಈ ಪಾನೀಯ ಸೇವನೆ ನಂತ್ರ ತಕ್ಷಣ ಬ್ರಷ್ ಮಾಡಬೇಕು.
ಬೇಯಿಸಿದ ಸಿಹಿತಿಂಡಿಗಳು ಹಲ್ಲು ಮತ್ತು ಒಸಡುಗಳ ರೋಗಗಳನ್ನು ಉಲ್ಬಣಗೊಳಿಸುತ್ತವೆ. ಕೇಕ್ ಮತ್ತು ಪೇಸ್ಟ್ರಿಗಳಂತಹ ಆಹಾರವನ್ನು ಬೆಳಿಗ್ಗೆ ತಿನ್ನುವುದನ್ನು ತಪ್ಪಿಸಿ. ಉಪಹಾರದಲ್ಲಿ ಓಟ್ಸ್ ಅಥವಾ ಕಾರ್ನ್ಫ್ಲೇಕ್ಗಳನ್ನು ಸೇವಿಸುತ್ತಿದ್ದರೆ ಅದಕ್ಕೆ ಸಕ್ಕರೆ ಸೇರಿಸಬೇಡಿ.
ಬಿಳಿ ಬ್ರೆಡ್, ಆಲೂಗೆಡ್ಡೆ ಚಿಪ್ಸ್ ನಂತಹ ಆಹಾರವನ್ನು ತಿನ್ನಬೇಡಿ. ಸಂಸ್ಕರಿಸಿದ ಕಾರ್ಬ್ಸ್ ಮತ್ತು ಪಿಷ್ಟವನ್ನು ತಿನ್ನುವುದು ಹಲ್ಲುಗಳಿಗೆ ಹಾನಿ ಮಾಡುತ್ತದೆ. ಪಿಷ್ಟದ ಆಹಾರ ಹೆಚ್ಚಾಗಿ ಹಲ್ಲುಗಳಿಗೆ ಅಂಟಿಕೊಳ್ಳುತ್ತವೆ.