ನಿಲ್ಲದ ರಷ್ಯಾ- ಉಕ್ರೇನ್ ಕಾಳಗ : ಸೇಡಿಗೆ ಮತ್ತೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ!
ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ದಿನದಿಂದ ದಿನಕ್ಕೆ ಭೀಕರವಾಗುತ್ತಿದ್ದು, ಇಬ್ಬರ ಜಗಳದಲ್ಲಿ ಈಗಾಗಲೇ ಲಕ್ಷಾಂತರ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆಂಬ ಆರೋಪ ಇದೆ. ಆದರೂ ಯುದ್ಧ ನಿಲ್ಲಿಸಲು ಎರಡೂ ದೇಶಗಳು ಸಿದ್ಧವಿಲ್ಲ. ಹೀಗಾಗಿಯೇ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದು, ಇದೀಗ ರಷ್ಯಾ ಮತ್ತೆ ಸಮುದ್ರ ಒಪ್ಪಂದ ಹಿಂತೆಗೆದುಕೊಂಡ ಬಳಿಕ ಮಂಗಳವಾರ ಕ್ಷಿಪಣಿ ದಾಳಿ ನಡೆಸಿದೆ. ಒಪ್ಪಂದದಿಂದ ಹಿಂತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ದಕ್ಷಿಣದ ಬಂದರು ನಗರಗಳಾದ ಒಡೆಸಾ ಮತ್ತು ಮೈಕೊಲೈವ್ ಅನ್ನು ರಷ್ಯಾ ಕ್ಷಿಪಣಿ ಮೂಲಕ ಹೊಡೆದುರುಳಿಸಿದೆ. ಉಕ್ರೇನ್‌ನ ಕಪ್ಪು ಸಮುದ್ರದ ಕರಾವಳಿಯ ಮೇಲೆ ರಷ್ಯಾದ ಕ್ಷಿಪಣಿ ದಾಳಿ ನಡೆಸಿ 60,000 ಟನ್ ಧಾನ್ಯಗಳನ್ನು ನಾಶಪಡಿಸಿದೆ ಎಂದು ವರದಿಯಾಗಿದೆ. ಈ ದಾಳಿಯಿಂದ ಮೂಲಸೌಕರ್ಯಗಳ ರಫ್ತು ನಿಂತಿದೆ ಎಂದು ಕೃಷಿ ಸಚಿವ ಮೈಕೋಲಾ ಸೋಲ್ಸ್ಕಿ ಹೇಳಿದ್ದಾರೆ. ಹೀಗಾಗಿಯೇ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದು, ಇದೀಗ ಉಕ್ರೇನ್ ತನ್ನ ನೆಲೆಗಳ ಮೇಲೆ ಭೀಕರವಾದ ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ ರೊಚ್ಚಿಗೆದ್ದಿದೆ.