ನೀತಿ ಸಂಹಿತೆ ಉಲ್ಲಂಘನೆ – ಎಂಎಲ್ಸಿ ಕವಿತಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಹೈದರಾಬಾದ್: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದಕ್ಕೆ ಬಿಆರ್ಎಸ್ ಎಂಎಲ್ಸಿ ಕೆ. ಕವಿತಾ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.
ತೆಲಂಗಾಣದಲ್ಲಿ 119 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಕವಿತಾ ಅವರು ಬಂಜಾರ ಹಿಲ್ಸ್ನ ಡಿಎವಿ ಶಾಲೆಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ತಾನು ಮತ ಚಲಾಯಿಸಿದ್ದು ಎಲ್ಲರು ಬಿಆರ್ ಎಸ್ ಪಕ್ಷಕ್ಕೆ ಮತ ಹಾಕುವಂತೆ ಮತದರಲ್ಲಿ ಮನವಿಯನ್ನು ಮಾಡಿದ್ದಾರೆ.
ಇನ್ನು ಕವಿತಾ ಅವರ ಈ ಹೇಳಿಕೆಗೆ ಬೇರೆ ಪಕ್ಕ್ಷದ ನಾಯಕರು ಹಾಗೂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು ಅಲ್ಲದೆ ತೆಲಂಗಾಣ ಕಾಂಗ್ರೆಸ್ ನಾಯಕ ಜಿ ನಿರಂಜನ್ ಅವರು ಬಿಆರ್ಎಸ್ ಎಂಎಲ್ಸಿ ಕೆ ಕವಿತಾ ವಿರುದ್ಧ ಗುರುವಾರ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.