ನೀವು ಪಾರಿವಾಳಗಳನ್ನು ಸಾಕಿದ್ದರೆ, ಈ ಸುದ್ದಿ ಮೇಲೆ ಕಣ್ಣಾಯಿಸಿ.!
ಬೆಂಗಳೂರು: ಹೌದು ಪಾರಿವಾಳಗಳಿಗೆ ತರಬೇತಿ ನೀಡಿದರೆ ಏನು ಬೇಕಾದರೂ ಕಲಿಯುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.
ಕೃತಕ ಬುದ್ಧಿಮತ್ತೆಯಲ್ಲಿ ಅವು ಕೂಡ ಕೆಲವು ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಕೊಲಂಬಸ್ ಓಹಿಯೋ ಸ್ಟೇಟ್ ವಿವಿ ಸಂಶೋಧಕರು ಕಂಡುಹಿಡಿದಿದ್ದಾರೆ. Alನಲ್ಲಿ ಬಳಸುವ ‘ಬ್ರೂಟ್ ಫೋರ್ಸ್’ ವಿಧಾನವನ್ನು ಅವು ಅನುಸರಿಸುವುದಾಗಿ ಹೇಳಿದ್ದಾರೆ.
4 ಪಾರಿವಾಳಗಳನ್ನು ಪರೀಕ್ಷಿಸುವ ಮೂಲಕ ಇದನ್ನು ಕಂಡುಹಿಡಿದಿದ್ದಾರೆ. ಕೆಲ ವಿಷಯಗಳನ್ನು ಮನುಷ್ಯನಿಗಿಂತ ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ಕಲಿಯುತ್ತವೆ.