ನೈಟ್ರೋಜನ್ ಅನಿಲದ ಮೂಲಕ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ ಅಮೇರಿಕಾ ಸರ್ಕಾರ
ವಾಷಿಂಗ್ಟನ್:ಇತಿಹಾಸದಲ್ಲಿ ಮೊದಲ ಅಮೇರಿಕಾ ಸರ್ಕಾರವು ನೈಟ್ರೋಜನ್ ಅನಿಲದ ಮೂಲಕ ಅಪರಾಧಿಯೊಬ್ಬನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಅಮೇರಿಕಾ ಪ್ರಜೆ ಕೆನ್ನೆತ್ ಯುಜಿನಿ ಸ್ಮಿತ್ ಎಂಬಾತನಿಗೆ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ನೀಡುವಂತೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ಅಮೇರಿಕಾದ ಅಲಬಾಮಾ ರಾಜ್ಯದ ಹೋಲ್ಮನ್ ಕಾರಾಗೃಹದಲ್ಲಿ ಅಪರಾಧಿ ದೇಹಕ್ಕೆ ನೈಟ್ರೋಜನ್ ಅನಿಲ ಹರಿಸಿದ್ದು, ಈ ವೇಳೆ ಆತ ಆಮ್ಲಜನಕದ ಕೊರತೆ ಉಂಟಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಇನ್ನು ಯುಜಿನಿ ಸ್ಮಿತ್ ಅವರ ಮರಣದಂಡನೆಯು ಸುಮಾರು 22 ನಿಮಿಷಗಳನ್ನು ತೆಗೆದುಕೊಂಡಿದ್ದು, ಆತ ಹಲವಾರು ನಿಮಿಷಗಳ ಕಾಲ ಪ್ರಜ್ಞಾಪೂರ್ವಕವಾಗಿ ಕಾಣಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಯುಜಿನಿ ಸ್ಮಿತ್ 1988ರಲ್ಲಿ 45 ವರ್ಷದ ಎಲಿಜಬೆತ್ ಸೆನೆಟ್ ಎಂಬವರನ್ನು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆ ಒಳಗಾಗಿದ್ದರು.
ಇನ್ನು ಅಲಬಾಮಾ ಸೇರಿದಂತೆ ಅಮೆರಿಕ ದೇಶದ ಒಟ್ಟು 3 ಕಾರಾಗೃಹಗಳಲ್ಲಿ ಅಪರಾಧಿಗಳಿಗೆ ನೈಟ್ರೋಜನ್ ಅನಿಲ ಹರಿಸಿ ಉಸಿರುಗಟ್ಟಿಸುವ ಮೂಲಕ ಮರಣ ದಂಡನೆ ಶಿಕ್ಷೆ ಜಾರಿಗೊಳಿಸುವ ವಿಧಾನ ಅಳವಡಿಸಲಾಗಿದೆ.
ಇದಕ್ಕೂ ಮುನ್ನ ವಿಷಕಾರಿ ರಾಸಾಯನಿಕ ದ್ರವ ಪದಾರ್ಥಗಳನ್ನು ಮರಣ ದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ಇಂಜೆಕ್ಷನ್ ಮೂಲಕ ನೀಡಿ ಕೊಲ್ಲಲಾಗುತ್ತಿತ್ತು. ಆದರೆ ಇದೀಗ ನೈಟ್ರೋಜನ್ ಅನಿಲದ ಮೂಲಕ ಮರಣ ದಂಡನೆ ಶಿಕ್ಷೆ ವಿಧಿಸಿದೆ.