ಪಕ್ಷ ಬಿಟ್ಟು ಹೋದೋರು ವಾಪಸ್ ಬರುವ ಬಗ್ಗೆ ಡಿಕೆಶಿ ಮಾತು..!
ಬೆಂಗಳೂರು : ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿಗೆ ಸೇರಿದ ಕಾಂಗ್ರೆಸ್ ನ ಹದಿನೇಳು ಮಂದಿ ಶಾಸಕರು ವಾಪಸ್ ಪಕ್ಷಕ್ಕೆ ಮರಳಲು ವೇದಿಕೆ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸುದ್ದಿಗಾರರು ಇಂದು ಸದಾಶಿವನಗರದ ಅವರ ನಿವಾಸದ ಬಳಿ ನೇರವಾಗಿ ಕೇಳಿದಾಗ, ರಾಜಕೀಯದಲ್ಲಿ ಯಾವಾಗ ಏನಾಗುತ್ತೆ ಅಂತಾ ಹೇಳಲಾಗದು. ಏನುಬೇಕಾದರೂ ಆಗಬಹುದು ಅಂತಾ ಒಗಟಾಗಿ ಹೇಳಿದರು. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಿದ್ದವರ ಪೈಕಿ ಮೊದಲ ಹಂತದಲ್ಲಿ ಒಂದಷ್ಟು ಶಾಸಕರು ಮರಳಕಿದ್ದಾರೆಂಬುದನ್ನು ಪರೋಕ್ಷವಾಗಿ ಹೇಳಿದಂತಿದೆ.