ಪತ್ನಿಯ ಶವವನ್ನು ಫ್ರೀಜರ್’ನಲ್ಲಿಟ್ಟಿದ್ದ ಪತಿ; ಕೊಲೆ ಆರೋಪ
ಮಧ್ಯಪ್ರದೇಶ: ಪತಿಯೊಬ್ಬ ತನ್ನ ಪತ್ನಿಯ ಶವವನ್ನು 3 ದಿನಗಳ ಕಾಲ ಫ್ರೀಜರ್’ನಲ್ಲಿ ಇರಿಸಿದ್ದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ಭಾನುವಾರ (ಜುಲೈ 2) ಶವವನ್ನು ವಶಪಡಿಸಿಕೊಂಡಿದ್ದಾರೆ.
ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ಆಕೆಯ ಸಹೋದರ ಆರೋಪಿಸಿದ್ದಾರೆ. ಆದರೆ ಆಕೆ ಜಾಂಡೀಸಿನಿಂದ ಮೃತಪಟ್ಟಿರುರುವುದಾಗಿ ಆಕೆಯ ಪತಿ ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ಪತ್ನಿ ಶುಕ್ರವಾರದಂದು ಮೃತಪಟ್ಟಿದ್ದು, ಆಕೆಯ ಅಂತ್ಯಕ್ರಿಯೆಗಾಗಿ ತಮ್ಮ ಮಗ ಮುಂಬೈನಿಂದ ಹಿಂದಿರುಗುವವರೆಗೆ ಕಾಯಬೇಕಿತ್ತು ಅದಕ್ಕೆ ಫ್ರೀಜರ್’ನಲ್ಲಿ ಇರಿಸಿದ್ದೆ ಎಂದು ಹೇಳಿದ್ದಾರೆ. ಮಹಿಳೆಯ ಸಾವಿಗೆ ಕಾರಣ ತಿಳಿಯಲು ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸುಮಿತ್ರಿ ಎಂದು ಗುರುತಿಸಲಾದ 40 ವರ್ಷದ ಮಹಿಳೆಯ ಶವವನ್ನು ವಶಪಡಿಸಿಕೊಂಡಿದ್ದೇವೆ.
ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಕಾರು- ಸವಾರನಿಗೆ ಗಂಭೀರ ಗಾಯ
ಆಕೆಯ ಸಹೋದರ ಅಭಯ್ ತಿವಾರಿ ತನ್ನ ಭಾವ ಅಕ್ಕನನ್ನು ಕೊಂದಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ವಿಜಯ್ ಸಿಂಗ್ ತಿಳಿಸಿದ್ದಾರೆ. ಮಿಶ್ರಾ ತನ್ನ ಸಹೋದರಿಯನ್ನು ಥಳಿಸುತ್ತಿದ್ದರು ಹೀಗಾಗಿ ಮೃತಪಟ್ಟಿರಬಹುದು ಎಂದು ದೂರುದಾರರು ತಿಳಿಸಿದ್ದಾರೆ.