Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪರಪ್ಪನ ಅಗ್ರಹಾರ ಜೈಲಿನಲ್ಲಿ ಚೈನ್ ಚೈತ್ರಾ ಕಂಗಾಲು – ನಿದ್ದೆಯಿಲ್ಲದ ರಾತ್ರಿ ಕಳೆದ ಚೈತ್ರಾ, ಉಕ್ಕಿ ಹರಿದಿದೆ ಕಣ್ಣೀರು..!!

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿಯಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಸಿಕ್ಕಿಬಿದ್ದಿರುವ ಚೈತ್ರಾ ಕುಂದಾಪುರ ಮತ್ತು ಇತರ ಆರೋಪಿಗಳು ನಿನ್ನೆ (ಸೆ.23) ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದು, ಚೈತ್ರಾ ರಾತ್ರಿಯಿಡೀ ನಿದ್ದೆಯಿಲ್ಲದೇ ಕಣ್ಣೀರಿಟ್ಟಿದ್ದಾಳೆ.

ಹಣ ವಂಚನೆ ಮಾಡಿರುವ ಬಗ್ಗೆ ತಪ್ಪನ್ನು ಒಪ್ಪಿಕೊಂಡಿರುವ ಚೈತ್ರಾ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲ ದಿನ ಕಳೆದಿದ್ದಾಳೆ. ನಿದ್ದೆ ಇಲ್ಲದೇ ಚಿಂತೆಯಲ್ಲೇ ಕಣ್ಣೀರು ಹಾಕುತ್ತಾ ಇಡೀ ರಾತ್ರಿ ಕಳೆದಿದ್ದಾಳೆ. ನಿನ್ನೆ ಕೋರ್ಟ್ ನಲ್ಲೂ ಸಹ ಚೈತ್ರಾ ಕಣ್ಣೀರಿಟ್ಟಿದ್ದಳು.

ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಜೈಲು ಪ್ರವೇಶಿಸಿದ್ದ ಚೈತ್ರಾ ಅಂಡ್​ ಗ್ಯಾಂಗ್ ಅನ್ನು ಪರಪ್ಪನ ಅಗ್ರಹಾರ ಜೈಲಿನ ಹೊಸ ಬಂಧಿಖಾನೆಗೆ ಶಿಫ್ಟ್ ಮಾಡಲಾಗಿದೆ. ಚೈತ್ರಾ ಪ್ರತ್ಯೇಕ ಕ್ವಾರಂಟೈನ್ ಸೆಲ್​ನಲ್ಲಿದ್ದಾಳೆ. ನಿನ್ನೆ ರಾತ್ರಿ ಜೈಲು ಸಿಬ್ಬಂದಿ ನೀಡಿದ ಚಪಾತಿ, ಅನ್ನ-ಸಾಂಬರ್ ಅನ್ನು ಚೈತ್ರಾ ಸೇವಿಸಿದ್ದಾಳೆ. ಇಂದು ಬೆಳಗ್ಗೆ ಜೈಲು ಸಿಬ್ಬಂದಿ ಕೊಟ್ಟ ಪಲಾವ್ ಸೇವನೆ ಮಾಡಿದ್ದಾಳೆ.

ಸದ್ಯ ಇನ್ನು 9 ದಿನ ಹೊಸ ಬಂಧಿಖಾನೆಯಲ್ಲೇ ಚೈತ್ರಾ ಉಳಿಯಲಿದ್ದಾಳೆ. ಬಳಿಕ ಹಳೆಯ ಬಂಧಿಖಾನೆಗೆ ಚೈತ್ರಾಳನ್ನು ಜೈಲು ಸಿಬ್ಬಂದಿ ಶಿಫ್ಟ್ ಮಾಡಲಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆ ನಂತರ ಸಿಬ್ಬಂದಿ ಯುಟಿಪಿ(ಅಂಡರ್ ಟ್ರೈಯಲ್ ಪ್ರಿಸಿನರ್) ಸಂಖ್ಯೆ ನೀಡಲಿದ್ದಾರೆ. ಸದ್ಯ ತಿಂಡಿ ಸೇವಿಸಿರುವ ಚೈತ್ರಾ ಕ್ವಾರಂಟೈನ್ ಸೆಲ್ ಸಪ್ಪೆ ಮೋರೆ ಹಾಕಿಕೊಂಡು ಸಮಯ ಕಳೆಯುತ್ತಿದ್ದಾಳೆ.

ಪ್ರಕರಣದ ಇತರ ಆರೋಪಿಗಳಾದ ಗಗನ್ ಕಡೂರ್, ಪ್ರಜ್ವಲ್, ರಮೇಶ್, ಚೆನ್ನಾನಾಯ್ಕ್, ಧನರಾಜ್ ಹಾಗೂ ಶ್ರೀಕಾಂತ್ ಪ್ರತ್ಯೇಕ‌ ಪುರುಷರ ಸೆಲ್​ನಲ್ಲಿ ಇದ್ದಾರೆ. ಚೈತ್ರಾ ಹೊರತುಪಡಿಸಿ ಉಳಿದ ಆರೋಪಿಗಳಿಗೆ 10 ದಿನ ಕ್ವಾರಂಟೈನ್​ನಲ್ಲಿ ಇರಿಸಲಾಗಿದ್ದು, ವಂಚಕರ ತಂಡ ಇನ್ನಷ್ಟು ದಿನ ಜೈಲಿನಲ್ಲೇ ಕಾಲ ಕಳೆಯಲಿದೆ.