ಪರೀಕ್ಷೆ ಬರೆಯಲು ಬಂದಾಗಲೇ ಹಾರ್ಟ್ಅಟ್ಯಾಕ್ : ಕುಸಿದು ಬಿದ್ದ 9ನೇ ತರಗತಿ ವಿದ್ಯಾರ್ಥಿನಿ ಸಾವು
ಅಮ್ರೇಲಿ: ಪರೀಕೆ ಬರೆದು ಸುಂದರ ಬದುಕು ನಿರ್ಮಿಸಿಕೊಳ್ಳಲು ಪರೀಕ್ಷಾ ಹಾಲ್ಗೆ ಬಂದ 9ನೇ ತರಗತಿ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವನ್ನಪ್ಪಿರೋ ಘಟನೆ ಗುಜರಾತ್ನಲ್ಲಿ ನಡೆದಿದೆ. ವಿದ್ಯಾರ್ಥಿನಿ ಸಾಕ್ಷಿ ರಾಜೋಸಾರ ಹೃದಯ ಸ್ತಂಭನದಿಂದಲೇ ಕೊನೆಯುಸಿರೆಳೆದಿರುವ ಶಂಕೆ ವ್ಯಕ್ತವಾಗಿದೆ. ಪರೀಕ್ಷಾ ಕೇಂದ್ರದಲ್ಲಿ 15 ವರ್ಷದ ಬಾಲಕಿ ಹಠಾತ್ ಸಾವನ್ನಪ್ಪಿರೋದು ಆತಂಕವನ್ನು ಹೆಚ್ಚಿಸಿದೆ. ಗುಜರಾತ್ ಅಮ್ರೇಲಿಯ ಶಾಂತಬಾ ಗಜೇರಾ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ಸಾಕ್ಷಿ ಕೆಳಗೆ ಬಿಳುತ್ತಿದ್ದಂತೆ ಶಿಕ್ಷಕರು ಮತ್ತು ಸಹಪಾಠಿಗಳು ವಿದ್ಯಾರ್ಥಿನಿಯನ್ನು ಕೂಡಲೇ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಬಾಲಕಿಯು ಹೃದಯ ಸ್ತಂಭನದಿಂದಲೇ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.