Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಮರುನಾಮಕಾರಣ ಮಾಡಿ’: ಮಮತಾ ಬ್ಯಾನರ್ಜಿ ಒತ್ತಾಯ

ಕೊಲ್ಕತ್ತಾ: ರಾಜ್ಯಗಳ ಹೆಸರು ಬದಲಾಯಿಸಬಹುದಾದ ಪಟ್ಟಿಯಲ್ಲಿ ಪಶ್ಚಿಮ ಬಂಗಾಳವನ್ನು ಸೇರಿಸಿಲ್ಲ. ಆದರೆ ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಮರುನಾಮಕಾರಣ ಮಾಡಿ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊಲ್ಕತ್ತಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದ ಹೆಸರು ಬಾಂಗ್ಲಾ ಎಂದು ಬದಲಾದರೆ ವಿವಿಧ ಸ್ಪರ್ಧೆಗಳಿಗೆ ಹಾಗೂ ಇತರ ಕಾರ್ಯಕ್ರಮಗಳಿಗೆ ಹೋಗುವ ನಮ್ಮ ಮಕ್ಕಳಿಗೂ ಅನುಕೂಲವಾಗುತ್ತದೆ. ಪ್ರತಿಯೊಂದು ಕಡೆ ಇಂಗ್ಲಿಷ್ ಅಕ್ಷರ ಮಾಲೆ ಪ್ರಕಾರ ರಾಜ್ಯಗಳ ಹೆಸರು ಪರಿಗಣನೆಗೆ ತೆಗೆದುಕೊಂಡಗಾ ನಮ್ಮ ರಾಜ್ಯದ ಹೆಸರು ಕೊನೆಯಲ್ಲಿ ಬರುತ್ತದೆ. ಅಲ್ಲಿಯ ತನಕ ನಾವು ಕಾಯಬೇಕಾಗುತ್ತದೆ ಎಂದರು.

ಪಶ್ಚಿಮ ಬಂಗಾಳದ ಹೆಸರಿನ ಜೊತೆ ಪಶ್ಚಿಮ ಪದದ ಅವಶ್ಯಕತೆ ಇಲ್ಲ. ಪಾಕಿಸ್ತಾನದಲ್ಲೂ ಒಂದು ಪಂಜಾಬ್ ಇದ್ದರೂ ನಮ್ಮ ದೇಶದ ಪಂಜಾಬ್ ಅನ್ನು ಪ್ರತ್ಯೇಕಿಸಲು ಬೇರೆ ಯಾವುದೇ ಹೆಸರು ಬದಲಾವಣೆ ಕೂಡ ಮಾಡಲಾಗಿಲ್ಲ ಎಂದು ತಿಳಿಸಿದರು.

ಇನ್ನು ತೃಣಮೂಲ ಕಾಂಗ್ರೆಸ್ ಸರ್ಕಾರ 2011ರಲ್ಲಿ ರಾಜ್ಯದಲ್ಲಿ ಮೊದಲು ಅಧಿಕಾರಕ್ಕೆ ಬಂದಾಗಲೂ ರಾಜ್ಯದ ಹೆಸರು ಬದಲಾವಣೆಗೆ ಮನವಿ ಮಾಡಿತ್ತು. ಆದರೆ ಈಗ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿವೆಯೆನ್ನುವಾಗ ರಾಜ್ಯದ ಹೆಸರು ಬದಲಾವಣೆಗೆ ಆಗ್ರಹಿಸಿದ್ದಾರೆ. ಇದರೊಂದಿಗೆ ಬಾಂಬೆ ಹೆಸರು ಮುಂಬೈ ಆಗಿರುವುದು, ಒರಿಸ್ಸಾ ರಾಜ್ಯದ ಹೆಸರು ಒಡಿಶಾ ಎಂದು ಬದಲಾಗಿರುವುದನ್ನು ಕೂಡ ಅವರು ಉಲ್ಲೇಖಿಸಿದ್ದಾರೆ.