ಪಾಕಿಸ್ತಾನದಲ್ಲಿ ಹೊತ್ತಿ ಉರಿದ ಶಾಪಿಂಗ್ ಮಾಲ್ – 11 ಮಂದಿ ಸಜೀವ ದಹನ.!
ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿಯ ಬಹುಮಹಡಿ ಶಾಪಿಂಗ್ ಮಾಲ್ನಲ್ಲಿ ಭಾರೀ ಬೆಂಕಿಯ ಅವಘಡ ಸಂಭವಿಸಿದ್ದು, ಕನಿಷ್ಠ 11 ಮಂದಿ ಸಜೀವ ದಹನವಾಗಿದ್ದಾರೆ. ಇನ್ನೂ ಅನೇಕರು ಶಾಪಿಂಗ್ ಮಾಲ್ನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕರಾಚಿಯ ರಶೀದ್ ಮಿನ್ಹಾಸ್ ರಸ್ತೆಯಲ್ಲಿರುವ ಆರ್ಜೆ ಶಾಪಿಂಗ್ ಮಾಲ್ನಲ್ಲಿ ಇಂದು ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಏಕಾಏಕಿ ಬೆಂಕಿ ಭಾರಿ ಪ್ರಮಾಣದಲ್ಲಿ ಆವರಿಸಿಕೊಂಡು 11 ಮಂದಿಯನ್ನು ಬಲಿ ಪಡೆದಿದೆ. ಅಗ್ನಿಶಾಮಕ ದಳವು ರಕ್ಷಣಾ ಕಾರ್ಯ ಆರಂಭಿಸಿದ್ದು, ಸುಮಾರು 50 ಜನರನ್ನು ರಕ್ಷಿಸಿದೆ. ಇನ್ನೂ ಅನೇಕರು ಮಾಲ್ನಲ್ಲಿ ಉಳಿದಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಬೆಂಕಿಯಲ್ಲಿ ಗಾಯಗೊಂಡ ಹಲವಾರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.