Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪಾಕಿಸ್ತಾನದಿಂದ ಮರಳಿ ಬರುತ್ತಿದ್ದಾಳೆ ಅಂಜು – ಎರಡೇ ತಿಂಗಳೊಳಗೆ ಪಾಕಿಸ್ತಾನದ ಪ್ರಿಯಕರನ ಲವ್ ಸಾಕಾಯ್ತಾ?

ಫೇಸ್​ಬುಕ್​​ನಲ್ಲಿ ಪರಿಚಯವಾದ ಪ್ರಿಯಕರನಿಗಾಗಿ ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋಗಿದ್ದ ಅಂಜು ಅಲಿಯಾಸ್ ಫಾತಿಮಾ ಮರಳಿ ಭಾರತಕ್ಕೆ ಬರುತ್ತಿದ್ದಾಳೆ.

ನಾಲ್ಕು ವರ್ಷಗಳ ಹಿಂದೆ ಫೇಸ್ ಬುಕ್ ನಲ್ಲಿ ಪರಿಚಯವಾದ ಪ್ರಿಯಕರನಿಗಾಗಿ ರಾಜಸ್ಥಾನ ಮೂಲದ 34 ವರ್ಷದ ಅಂಜು ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಜುಲೈ 25ರಂದು ಭಾರತ ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ್ದಳು.

ಪಾಕಿಸ್ತಾನದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಗೆಳೆಯ ನಸ್ರುಲ್ಲ್​ನನ್ನು ಮದುವೆಯಾಗಿದ್ದಳು. ಆದರೆ ಅಂಜು ಈಗ ಮಕ್ಕಳ ನೆನಪು ಕಾಡುತ್ತಿದೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಮಕ್ಕಳನ್ನ ನೋಡಲು ಅಕ್ಟೋಬರ್ ನಲ್ಲಿ ಭಾರತಕ್ಕೆ ಮರಳುತ್ತಿದ್ದಾಳೆ ಎನ್ನಲಾಗಿದೆ.

ಪಾಕ್‌ ಸ್ಟಾರ್ ಗ್ರೂಪ್ ಆಫ್ ಕಂಪೆನಿ ಸಿಇಒ ಮೊಹ್ಸಿನ್ ಖಾನ್ ಅಬ್ಬಾಸಿ ಅವರು ಅಂಜುಗೆ ದುಬಾರಿ ಬೆಲೆಯ ಬಂಗಲೆಯನ್ನು ಉಡುಗೊರೆಯಾಗಿ ಕೊಟ್ಟಿದ್ದರು ಎನ್ನಲಾಗಿದೆ. ಆಕೆಗೆ ಪಾಕಿಸ್ತಾನದ ಪಿಕೆಆರ್ 50,000 ಚೆಕ್‌ ಅನ್ನು ಹಸ್ತಾಂತರಿಸಲಾಗಿದೆ. ಆಕೆಯನ್ನು ಭೇಟಿಯಾಗುತ್ತಿರುವ ಪಾಕ್‌ ಉದ್ಯಮಿಯ ಸ್ನೇಹಿತರು ಅನೇಕ ಉಡುಗೊರೆಗಳನ್ನು ನೀಡಿದ್ದರು.

ಪಾಕಿಸ್ತಾನದಲ್ಲಿ ಕೇಕ್ ಕತ್ತರಿಸಿ ಪಾಕ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಅಂಜು ಇದೀಗ ಮರಳಿ ಬರುವುದು ಬಹುತೇಕ ಖಚಿತವಾಗಿದೆ. ಆದರೆ ಮಕ್ಕಳನ್ನು ಬಿಟ್ಟು ಹೋಗಿರುವ ಅಂಜು ವಿರುದ್ಧ ಆಕೆಯ ಮೊದಲಿನ ಗಂಡ ಸಿಟ್ಟಾಗಿದ್ದು ಮುಂದೇನಾಗುವುದೋ ಕಾದು ನೋಡಬೇಕಿದೆ.