ಪಾರ್ಕ್ನಲ್ಲಿ ಆಡುತ್ತಿದ್ದ ವೇಳೆ ಸಿಮೆಂಟ್ ಜಿಂಕೆ ಮುರಿದು ಆರು ವರ್ಷದ ಮಗು ಸಾವು
ಶಿವಮೊಗ್ಗ: ಮುದ್ದಿನಕೊಪ್ಪದಲ್ಲಿರುವ ಟೀ ಪಾರ್ಕ್ನಲ್ಲಿ ಆಟವಾಡಲೆಂದು ಸಿಮೆಂಟ್ ಜಿಂಕೆ ಮೇಲೆ ಏರಿದ್ದ ಆರು ವರ್ಷದ ಮಗುವೊಂದು ಜಿಂಕೆ ಪ್ರತಿಮೆ ಮುರಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟ ಬಾಲಕಿ ಶಿವಮೊಗ್ಗ ನಗರದ ಹರೀಶ್ ಹಾಗೂ ಲಕ್ಷ್ಮೀ ದಂಪತಿ ಪುತ್ರಿ ಸಮೀಕ್ಷಾ ಎಂದು ಗುರುತಿಸಲಾಗಿದೆ.
ಮನೆಮಂದಿ ಭಾನುವಾರದಂದು ಮಕ್ಕಳನ್ನು ಆಟವಾಡಿಸಲು ಟೀ ಪಾರ್ಕ್ಗೆ ಕರೆದುಕೊಂಡು ಹೋಗಲಾಗಿತ್ತು ಆದರೆ ಈ ವೇಳೆ ಸಿಮೆಂಟ್ ಜಿಂಕೆ ಮೇಲೆ ಮಗು ಕುಳಿತುಕೊಂಡಿದ್ದು, ಭಾರ ತಾಳರಾದರೆ ಸಿಮೆಂಟ್ ಜಿಂಕೆ ಮುರಿದು ಬಿದ್ದು ಅವಘಡ ಸಂಭವಿಸಿದೆ.