Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಪಿ.ಎಂ ವಿಶ್ವಕರ್ಮ’ ನೂತನ ಯೋಜನೆಗೆ ಸೆ.17ರಂದು ಪ್ರಧಾನಿ ಮೋದಿ ಚಾಲನೆ

ನವದೆಹಲಿ: ವಿಶ್ವಕರ್ಮ ಜಯಂತಿಯ ಅಂಗವಾಗಿ ‘ಪಿ.ಎಂ ವಿಶ್ವಕರ್ಮ’ ಎಂಬ ಹೊಸ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟಂಬರ್ 17ರಂದು ಚಾಲನೆ ನೀಡಲಿದ್ದಾರೆ.

ಪಿ.ಎಂ ವಿಶ್ವಕರ್ಮ’ ಯೋಜನೆಯಿಂದಾಗಿ ಸಾಂಪ್ರದಾಯಿಕ ಕೌಶಲ ಕಾರ್ಯಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಹಾಗೂ ಕರಕುಶಲಿಗಳಿಗೆ ಸಹಾಯವಾಗಲಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಇನ್ನು ಪಿ.ಎಂ ವಿಶ್ವಕರ್ಮ ಯೋಜನೆ ಪ್ರಾರಂಭಿಸುವುದಾಗಿ ಮೋದಿ ಅವರು ಕಳೆದ ಸ್ವಾತಂತ್ರ್ಯ ದಿನದಂದು ಘೋಷಿಸಿದ್ದು, ಇದಕ್ಕಾಗಿ 13 ಸಾವಿರ ಕೋಟಿಯಷ್ಟು ನಿಧಿಯನ್ನು ಮೀಸಲಿಡಲಾಗಿದೆ.