Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪುತ್ತೂರು: ಮಗನ ಮದರಂಗಿ ಶಾಸ್ತ್ರದಂದು ಕಾಣೆಯಾಗಿದ್ದ ತಂದೆ- ಮಂಗಳೂರಿನಲ್ಲಿ ಪತ್ತೆ

ಪುತ್ತೂರು: ಮಗನ ಮದರಂಗಿ ಶಾಸ್ತ್ರದಂದು ತಂದೆ ನಾಪತ್ತೆಯಾಗಿದ್ದು, ಇದೀಗ ನಾಪತ್ತೆಯಾಗಿದ್ದ ವ್ಯಕ್ತಿ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಉಮ್ಮರ್ (60) ನಾಪತ್ತೆಯಾದ ವ್ಯಕ್ತಿ.

ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ

ಸಂಪ್ಯ ಗ್ರಾಮಾಂತರ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಮನೆಯವರ ಜೊತೆ ಕಳುಹಿಸಿಕೊಟ್ಟ ಘಟನೆ ನಡೆದಿದೆ. ಪಿ ಎಸ್ ಐ ಧನಂಜಯ ಬಿ.ಸಿ ಮಾರ್ಗದರ್ಶನದಂತೆ ಠಾಣಾ ಸಿಬ್ಬಂದಿಗಳಾದ ಪ್ರವೀಣ್, ಮುನಿಯ ನಾಯ್ಕ , ಅದ್ರಾಮ್, ಪ್ರಶಾಂತ ಅವರು ಉಮ್ಮರ್‌ರನ್ನು ಸಂಬಂಧಿಕರ ಸಹಕಾರದೊಂದಿಗೆ ಮಂಗಳೂರಿನಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆತಂದು ಅವರ ಮಗನಾದ ಆಸೀಫ್ ರವರೊಂದಿಗೆ ಕಳುಹಿಸಿಕೊಟ್ಟರು.