ಪೊಂಗಲ್ ಸಂಭ್ರಮಾಚರಣೆ: ಬಾಲಕಿಯ ಹಾಡಿಗೆ ಪ್ರಧಾನಿ ಫಿದಾ – ಶಾಲು ಹೊದಿಸಿ ಸನ್ಮಾನ
ನವದೆಹಲಿ: ಕೇಂದ್ರ ಸಚಿವ ಡಾ. ಎಲ್. ಮುರುಗನ್ ಅವರ ದೆಹಲಿ ಮನೆಯಲ್ಲಿ ತಮಿಳುನಾಡಿನ ಪ್ರಸಿದ್ಧ ‘ಪೊಂಗಲ್’ (ಸಂಕ್ರಾಂತಿ) ಹಬ್ಬದ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಈ ವೇಳೆ ಬಾಲಕಿಯ ಗಾನಸುಧೆಗೆ ಫಿದಾ ಆಗಿದ್ದಾರೆ. ಪೊಂಗಲ್ ಹಬ್ಬದ ಸಂಭ್ರಮಾಚರಣೆಯಲ್ಲಿ ಅತ್ಯಂತ ಅದ್ಭುತವಾಗಿ ಬಾಲಕಿ ಹಾಡುತ್ತಿದ್ದಾಗ ಪ್ರಧಾನಿ ಕುಳಿತಲ್ಲೇ ಕೈಯಿಂದ ತಾಳ ಹಾಕುತ್ತಿದ್ದರು. ಹಾಡು ಮುಗಿಯುತ್ತಿದ್ದಂತೆ ಎದ್ದು ನಿಂತ ಪ್ರಧಾನಿ ಮೋದಿ ಅವರು, ಬಾಲಕಿಯನ್ನು ಕೆಳಗೆ ಇಳಿದು ಬರುವಂತೆ ಸನ್ನೆ ಮಾಡಿದರು. ಪ್ರಧಾನಿಯ ಪ್ರೀತಿಯ ಕರೆಗೆ ಬಾಲಕಿ ಓಡೋಡಿ ಬಂದಳು. ಆಗ ಮೋದಿ ಅವರು ತಮ್ಮ ಶಾಲನ್ನು ಬಾಲಕಿಗೆ ಉಡುಗೊರೆಯಾಗಿ ನೀಡಿ ಹಾರೈಸಿದರು.