Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪ್ರಚೋದನಕಾರಿ ಭಾಷೆಯ ಬಳಕೆಯ ವಿರುದ್ಧ ರಾಜಕೀಯ ನಾಯಕರಿಗೆ ಖರ್ಗೆ ಎಚ್ಚರಿಕೆ

ದೆಹಲಿ:ತೃಣಮೂಲ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ ಅವರನ್ನು ಅಣಕಿಸಿದ್ದರ ವಿರುದ್ಧ ಆಡಳಿತಾರೂಢ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇತ್ತ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಶಾಂತವಾಗಿರಲು ಕರೆ ನೀಡಿದ್ದು ಪ್ರಚೋದನಕಾರಿ ಭಾಷೆಯ ಬಳಕೆಯ ವಿರುದ್ಧ ರಾಜಕೀಯ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಹೊಸ ಸಂಸತ್ತಿನ ಮೆಟ್ಟಿಲುಗಳ ಮೇಲೆ ಮಂಗಳವಾರ ಮಧ್ಯಾಹ್ನ ನಡೆದ ಅಣುಕು ವೈಯಕ್ತಿಕ ದಾಳಿ ಮತ್ತು ರೈತ ಅಥವಾ ಉಪರಾಷ್ಟ್ರಪತಿ ಜಾಟ್ ಸಮುದಾಯದವರ ಅವಮಾನ ಎಂದು ಧನ್ಖರ್ ಅವರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಈ ರೀತಿ ಮಾತನಾಡಬಾರದು. ಜನರನ್ನು ಪ್ರಚೋದಿಸುವುದನ್ನು ತಪ್ಪಿಸಬೇಕು. ಪ್ರತಿಯೊಂದು ವಿಚಾರದಲ್ಲೂ ಜಾತಿ ಎಳೆದು ಜನರನ್ನು ಕೆರಳಿಸಬಾರದು ಎಂದಿದ್ದಾರೆ.

ನನಗೆ ಮಾತನಾಡಲು ಅವಕಾಶ ನೀಡದಿದ್ದರೆ ನಾನು ದಲಿತ ಎಂಬ ಕಾರಣಕ್ಕೆ ಹೇಳಬೇಕೇ? ಎಂದು ಕೇಳಿದ ಖರ್ಗೆ, ನನ್ನ ಮೇಲೂ ಸಮುದಾಯದ ಹೆಸರಲ್ಲಿ ಆಗಾಗ್ಗೆ ದಾಳಿ ನಡೆಸಲಾಗುತ್ತಿದೆ ಎಂದಿದ್ದಾರೆ.