Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಪ್ರಜ್ವಲ್‌ ರೇವಣ್ಣ ಅನರ್ಹಗೊಳಿಸಿರುವುದು ಸತ್ಯಕ್ಕೆ ಸಂದ ಜಯ’ – ವಕೀಲ ದೇವರಾಜೇಗೌಡ

ಹಾಸನ: ಪ್ರಜ್ವಲ್‌ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಹೈಕೋರ್ಟ್‌ ಅನರ್ಹಗೊಳಿಸಿರುವುದು ಸತ್ಯಕ್ಕೆ ಸಂದ ಜಯ ಎಂದು ದೂರುದಾರ ಮತ್ತು ವಕೀಲ ದೇವರಾಜೇಗೌಡ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ರೇವಣ್ಣ ಪ್ರಜ್ವಲ್‌ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಹೈಕೋರ್ಟ್‌ ಅನರ್ಹಗೊಳಿಸಿರುವುದು ಸತ್ಯಕ್ಕೆ ಸಂದ ಜಯ. ಅವರ ಕುಟುಂಬವನ್ನು ರಾಜಕೀಯದಿಂದ ಶಾಶ್ವತವಾಗಿ ತೆಗೆಯಬೇಕು ಎಂಬುದೇ ನನ್ನ ಗುರಿ ಎಂದರು.

ಇನ್ನು ಇದು ಸಾಮಾನ್ಯ ಹಾಗೂ ಪ್ರಾಮಾಣಿಕ ವಕೀಲನಿಗೆ ಸಿಕ್ಕಿ ಜಯ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಇದುವರೆಗೂ ಬಂದ ಆಮಿಷಗಳಿಗೆ ಒಳಗಾಗಲಿಲ್ಲ. ಬೆದರಿಕೆಗೂ ಹೆದರಲಿಲ್ಲ. ಇದೆಲ್ಲದರ ನಡುವೆ ಪ್ರಜ್ವಲ್‌ ರೇವಣ್ಣ ಅವರ ಅಪರಾಧಗಳ ಬಗ್ಗೆ ಸೂಕ್ತ ದಾಖಲಾತಿಗಳೊಂದಿಗೆ ನ್ಯಾಯಾಲಯದ ಮೊರೆ ಹೋಗಿದ್ದು, ಅಪರಾಧ ಸಾಬೀತಾದ ಹಿನ್ನೆಲೆ ಸಂಸದ ಸ್ಥಾನದಿಂದ ಪ್ರಜ್ವಲ್‌ ರೇವಣ್ಣರನ್ನ ಅನರ್ಹಗೊಳಿಸಿ ಕೋರ್ಟ್‌ ತೀರ್ಪು ನೀಡಿದೆ ಎಂದಿದ್ದಾರೆ.