Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಪ್ರತಾಪ್ ಸಿಂಹ ಬಹಳ ಬುದ್ಧಿವಂತ. ಅದ್ಯಾಕೆ ಇಂಥವರಿಗೆ ಪಾಸ್ ಕೊಟ್ಟರೋ?’- ಡಿಕೆಶಿ ಕಿಡಿ

ಬೆಂಗಳೂರು: ಪ್ರತಾಪ್ ಸಿಂಹ ಬಹಳ ಬುದ್ಧಿವಂತ. ಅದ್ಯಾಕೆ ಇಂಥವರಿಗೆ ಪಾಸ್ ಕೊಟ್ಟರೋ? ಅವರ ಹೆಸರು ಹೇಳಲು ಇಲ್ಲಿ ನನಗೆ ಇಷ್ಟವಿಲ್ಲ ಎಂದು ಹೇಳುವ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಲಾಪ ನಡೆಯುತ್ತಿದ್ದ ಹೊತ್ತಿನಲ್ಲೇ ಪಾರ್ಲಿಮೆಂಟ್ ಒಳಗೆ ಕಲರ್ ಸ್ಮೋಕ್ ಸಿಡಿಸಿದ ಯುವಕರಿಗೆ ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ವಿತರಣೆಯಾಗಿದೆ ಎಂದು ಆರೋಪಿ ಕೇಳಿ ಬಂದಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, , ಎಲ್ಲರೂ ಫೋನ್ ಮಾಡುತ್ತಿದ್ದಾರೆ. ಏನು? ಯಾಕೆ? ಅಂತ ಕೇಳುತ್ತಿದ್ದಾರೆ. ನಾನು ಟಿವಿಯಲ್ಲಿ ನೋಡಿದೆ. ಮೇಲಿಂದಲೇ ಅವರು ಹಾರಿದ್ದಾರೆ. ಸಂಸದರೆಲ್ಲ ಇಲಿಗಳಂತೆ ಬಚ್ಚಿಕೊಳ್ಳುತ್ತಿದ್ದಾರೆ ಎಂದರು.

ನಮ್ಮ ಪ್ರತಿಪಕ್ಷದವರೇ ಇದರ ಹೊಣೆ ತೆಗೆದುಕೊಳ್ಳಬೇಕು. ಅವರು ಏನು ಬುದ್ಧಿವಾದ ಹೇಳುತ್ತಾರೋ ಹೇಳಲಿ ಎಂದು ಕಿಡಿಕಾರಿದರು.