Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಚೆಸ್‌ ತಾರೆ ಪ್ರಜ್ಞಾನಂದ

ನವದೆಹಲಿ: ಫಿಡೆ ಚೆಸ್‌ ವಿಶ್ವಕಪ್‌ನಲ್ಲಿ ರನ್ನರ್ ಅಪ್‌ ಭಾರತದ ಚೆಸ್‌ ತಾರೆ ರಮೇಶಬಾಬು ಪ್ರಜ್ಞಾನಂದ ಮತ್ತು ಅವರ ಪೋಷಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ‘ನೀವು ಉತ್ಕಟ ಚೆಸ್ ಪ್ರೀತಿ ಮತ್ತು ಪರಿಶ್ರಮಕ್ಕೆ ಅನ್ವರ್ಥದಂತಿದ್ದೀರಿ. ಭಾರತದ ಯುವಶಕ್ತಿ ವಿಶ್ವವನ್ನೇ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೀರಿ. ನಿಮ್ಮ ಬಗ್ಗೆ ಹೆಮ್ಮೆಯಿದೆ’ ಎಂದಿದ್ದಾರೆ.

ಪ್ರಜ್ಞಾನಂದ ಅವರನ್ನು ದೆಹಲಿ ಕಚೇರಿಯಲ್ಲಿ ಇಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸನ್ಮಾನಿಸಿದ್ದಾರೆ. ಕಳೆದ ವಾರ ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ವಿಶ್ವಕಪ್‌ ಚೆಸ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಪ್ರಜ್ಞಾನಂದ ಅವರು ಫೈನಲ್‌ನಲ್ಲಿ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್ ವಿರುದ್ಧ ಟೈಬ್ರೇಕ್‌ನಲ್ಲಿ ಸೋತಿದ್ದರು.