ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಉಲ್ಲಂಘನೆ – 7 ಅಧಿಕಾರಿಗಳ ಅಮಾನತು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 7 ಮಂದಿ ಅಧಿಕಾರಿಗಳನ್ನು ಅಮಾನತು ಗೊಳಿಸಲಾಗಿದೆ.
ಪ್ರಧಾನಿ ಮೋದಿ ಕಳೆದ ವರ್ಷ ಜನವರಿಯಲ್ಲಿ ಪಂಜಾಬ್ ಗೆ ಭೇಟಿ ನೀಡಿದ್ದಾಗ ಭದ್ರತಾ ಉಲಂಘನೆಯಾಗಿತ್ತು. ಈ ವೇಳೆ ಕರ್ತವ್ಯ ಲೋಪ ಉಂಟುಮಾಡಿದ್ದ ಆರೋಪದಲ್ಲಿ ಬಟಿಂಡಾ ಎಸ್ ಪಿ ಸೇರಿದಂತೆ 7 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಎಸ್ ಪಿ ಗುರ್ಬಿಂದರ್ ಸಿಂಗ್, ಡಿವೈಎಸ್ ಪಿ ಪರ್ಸೋನ್ ಸಿಂಗ್, ಡಿಎಸ್ ಪಿ ಜಗದೀಶ್ ಕುಮಾರ್, ಮೂವರು ಇನ್ಸ್ಪೆಕ್ಟರ್ ಗಳಾದ ತೇಜೇಂದ್ರ ಸಿಂಗ್, ಬಲ್ವಿಂದರ್ ಸಿಂಗ್ ಹಾಗೂ ಜತೀಂದರ್ ಸಿಂಗ್, ಓರ್ವ ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಕೇಶ್ ಕುಮಾರ್ ನ್ನು ಅಮಾನತುಗೊಳಿಸಲಾಗಿದೆ.