ಪ್ರಧಾನಿ ಮೋದಿಗೆ ‘ಶಿವ ಸಮ್ಮಾನ್ʼ ಪ್ರಶಸ್ತಿ ಘೋಷಣೆ
ಮುಂಬಯಿ: ಮಹಾರಾಷ್ಟ್ರದ ಸತಾರಾದಲ್ಲಿ ಶಿವನ ರಾಜಮನೆತನದ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫೆಬ್ರವರಿ 19 ರಂದು “ಶಿವ ಸಮ್ಮಾನ” ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಛತ್ರಪತಿ ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಛತ್ರಪತಿ ಉದಯ್ರಾಜೇ ಭೋಸಲೆ ಘೋಷಣೆ ಮಾಡಿದ್ದಾರೆ.
ಈ ಪ್ರಶಸ್ತಿಯನ್ನು ಫೆ. 19 ಸತಾರಾ ರಾಜಮನೆತನ ಮತ್ತು ಶಿವಭಕ್ತರು ಸ್ಥಾಪಿಸಿದ್ದಾರೆ ಹಾಗೂ ಸೈನಿಕ್ ಸ್ಕೂಲ್ ಮೈದಾನದಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಪ್ರಧಾನ ನ ಮಾಡಲಾಗುವುದು ಎಂದು ತಿಳಿಸಿದ್ದಾರೆ .
“ಶಿವ ಸಮ್ಮಾನ್” ಪ್ರಶಸ್ತಿಯನ್ನು ಪಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಅಭಿನಂದಿಸಿದ್ದಾರೆ. ಹಾಗೂ ಇದು ಎಲ್ಲಾ ಶಿವ ಭಕ್ತರಿಗೆ ಸಂತೋಷ ಮತ್ತು ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು. “ಭಾರತದ ಶ್ರೇಷ್ಠ ಮತ್ತು ಆದರ್ಶ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನಲ್ಲಿ ರಾಜಮನೆತನದವರು ನೀಡುವ “ಶಿವ ಸಮ್ಮಾನ್ ಪ್ರಶಸ್ತಿ” ಅನ್ನು ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗುವುದು ಎಂದು ಫಡ್ನವಿಸ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.