Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪ್ರಧಾನಿ ಮೋದಿಯಲ್ಲಿ ಆಟೋಗ್ರಾಫ್ ಕೇಳಿದ ಅಮೇರಿಕಾ ಅಧ್ಯಕ್ಷ ಜೋ ಬೈಡನ್

ಹಿರೋಶಿಮಾ:ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು  ಪ್ರಧಾನಿ ನರೇಂದ್ರ ಮೋದಿಯವರಿಗೆ ತಮಾಷೆಯ ದಾಟಿಯಲ್ಲಿ ಆಟೋಗ್ರಾಫ್ ಕೇಳಿದ್ದಾರೆ. ಪ್ರಧಾನಿ ಮೋದಿಯವರು  ಹೆಚ್ಚಿನ ಜನಸಂದಣಿಯನ್ನು ಹೇಗೆ ಸೂಕ್ತವಾಗಿ ನಿರ್ವಹಿಸುವ ಬಗೆ ಕುರಿತು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಮೆಚ್ಚುಗೆ ವ್ಯಕ್ತಪಡಿಸಿದ ಬಳಿಕ ಬೈಡನ್, ನಿಮ್ಮ ಆಟೋಗ್ರಾಫ್ ಕೊಡಿ ಎಂದು ಹಾಸ್ಯ ಮಾಡಿದಿದ್ದರು.

ವಾಷಿಂಗ್ಟನ್ ಡಿಸಿಗೆ ಮುಂದಿನ ತಿಂಗಳ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದು,ನಿನ್ನೆ ನಡೆದ ಜಿ7 ಮತ್ತು ಕ್ವಾಡ್ ಸಭೆಯ ಸಂದರ್ಭದಲ್ಲಿ ಜೋ ಬೈಡನ್ ಅವರು ಪ್ರಧಾನಿ ಮೋದಿ ಬಳಿ  ನಿಮ್ಮ ಕಾರ್ಯಕ್ರಮಕ್ಕೆ ಹಾಜರಾಗಲು ಜನರಿಂದ ಹೆಚ್ಚಿನ ಬೇಡಿಕೆ ಕೇಳಿ  ಬರುತ್ತಿದೆ ಎಂದು ಹೇಳಿದರು. ಇದೇ ವೇಳೆ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ಪ್ರತಿಕ್ರಿಯಿಸಿ, ಸಿಡ್ನಿಯಲ್ಲಿ ನಡೆಯಲಿರುವ ಸಮುದಾಯ ಸ್ವಾಗತ ಕಾರ್ಯಕ್ರಮದ ಸ್ಥಳವು 20,000 ಜನರ ಸಾಮರ್ಥ್ಯ ಹೊಂದಿದೆ. ಆದರೂ ಸಹ ಮೋದಿ ಕಾರ್ಯಕ್ರಮಕ್ಕೆ ಬರುತ್ತಿರುವ ವಿನಂತಿಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದರು.ಆ ನಂತರ, ಪಿಎಂ ಅಲ್ಬನೀಸ್ ಅವರು ತಾವು ಭಾರತಕ್ಕೆ ಭೇಟಿ ನೀಡಿದ ವೇಳೆ ಕ್ರೀಡಾಂಗಣದಲ್ಲಿ 90,000 ಕ್ಕೂ ಹೆಚ್ಚು ಜನರನ್ನು ಮೋದಿ ಸ್ವಾಗತಿಸಿದ ಬಗೆಯನ್ನು ನೆನಪಿಸಿಕೊಂಡರು.ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಮೋದಿ ಮತ್ತು ಅಲ್ಬನೀಸ್ ಗುಜರಾತ್ ಸ್ಟೇಡಿಯಂಗೆ ಬಂದಿದ್ದರು.

ಮೂರು ರಾಷ್ಟ್ರಗಳ ಭೇಟಿಯ ಭಾಗವಾಗಿ, ಮೋದಿ ಸೋಮವಾರ ಆಸ್ಟ್ರೇಲಿಯಾಕ್ಕೆ ಆಗಮಿಸಲಿದ್ದು, ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಂಗಳವಾರ  ಮಾತನಾಡಲಿದ್ದಾರೆ.