2021-22ರ ಆರ್ಥಿಕ ವರ್ಷದಲ್ಲಿ ಅವರ ಆಸ್ತಿ ಮೌಲ್ಯ 2.24 ಕೋಟಿ ರೂ. ಗಳಾಗಿದ್ದು, ಈ ವರ್ಷ ಶೇ. 15.69 ಅಂದರೆ 35,13,940 ರೂ. ಏರಿಕೆಯಾಗಿ 2.59 ಕೋಟಿ ರೂ. ಗೆ ತಲುಪಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ ಆಸ್ತಿ ಲೆಕ್ಕ ಪತ್ರದಲ್ಲಿ ತಿಳಿಸಿದ್ದಾರೆ.

ಒಂದಷ್ಟು ಹಣವಿದ್ದು, ಬ್ಯಾಂಕ್ ಸ್ಥಿರ ಠೇವಣಿ, ಬಹು ಆಯ್ಕೆ ಠೇವಣಿ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ,ಗಳು ಹಾಗೂ 4 ಚಿನ್ನದ ಉಂಗುರಗಳಿವೆ.

ತಮ್ಮ ಹೆಸರಿನಲ್ಲಿ ಯಾವುದೇ ಸ್ಥಿರ, ಚರ ಅಸ್ತಿ ಇಲ್ಲ ಎಂದಿರುವ ಅವರು, ಕಳೆದ ಬಾರಿ ಎಲ್ಐಸಿ ಪಾಲಿಸಿಗಳಿದ್ದು, ಈ ಬಾರಿ ಅದನ್ನು ಉಲ್ಲೇಖಿಸಿಲ್ಲ.

ಗುಜರಾತ್ ನ ಗಾಂಧಿನಗರದಲ್ಲಿರುವ ಎಸ್ ಬಿ ಐ ಶಾಖೆಯಲ್ಲಿ ಶೇ. 95. 55 ರಷ್ಟು ಅಸ್ತಿ ಎಫ್ ಡಿಆರ್, ಎಂಓಡಿ ರೂಪದಲ್ಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ. 17.64 ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಎಸ್ ಬಿ ಐನ ಮತ್ತೊಂದು ಖಾತೆಯಲ್ಲಿ 46 ಸಾವಿರ ರೂ. ಇದ್ದು, ಇದರಲ್ಲಿ 574 ರೂ. ಇಳಿಕೆಯಾಗಿದೆ.

ಠೇವಣಿ, ಅಂಚೆ ಉಳಿತಾಯ ಮೌಲ್ಯ ಈ ಬಾರಿ ಹೆಚ್ಚಿದೆ. ಪತ್ನಿ ಜಶೋದಾಬೆನ್ ಹೆಸರಿನಲ್ಲಿ ಇರುವ ಯಾವುದೇ ಆಸ್ತಿಯ ವಿವರ ನನಗೆ ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ.