ಪ್ರಧಾನಿ ಸಲಹೆಯ ಬೆನ್ನಲ್ಲೇ ತಮ್ಮ ಮದುವೆಯಲ್ಲಿ ಮಹತ್ವದ ಬದಲಾವಣೆ ತಂದ ನಟಿ ರಕುಲ್, ಜಾಕಿ ಜೋಡಿ
ಮುಂಬೈ: ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಫೆಬ್ರವರಿಯಲ್ಲಿ ಗೋವಾದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ.
ನಟಿ ರಕುಲ್ ಹಾಗೂ ಜಾಕಿ ಜೋಡಿಯು ವಿದೇಶದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಅನ್ನು ಯೋಜಿಸಿದ್ದರು. ಆದಾಗ್ಯೂ, ಭಾರತದಲ್ಲಿ ವಿವಾಹಗಳನ್ನು ಆಯೋಜಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಹಿನ್ನಲೆಯಲ್ಲಿ ನಟಿ ರಕುಲ್ ಅವರು ಸ್ಥಳವನ್ನು ಬದಲಾಯಿಸಿದರು ಎಂದು ವರದಿಗಳು ತಿಳಿಸಿವೆ. ಅವರು ಆರಂಭದಲ್ಲಿ ತಮ್ಮ ವಿವಾಹವನ್ನು ಮಧ್ಯಪ್ರಾಚ್ಯದಲ್ಲಿ ನಡೆಸಲು ಯೋಜಿಸಿದ್ದರು ಎಂದು ವರದಿಗಳು ಸೇರಿಸಲಾಗಿದೆ.