Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪ್ರಯಾಣಿಕರಿಗೆ ‘ಸ್ಪೆಷಲ್ ಆಫರ್’ ನೀಡಿದ ನಮ್ಮ ಮೆಟ್ರೋ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಗಳಿಗೆ ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಯಾಣಿಕರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದೆ.

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ವಿಶ್ವಕಪ್​ ಪಂದ್ಯಗಳು  ಅಕ್ಟೋಬರ್ 20, 26, ನವೆಂಬರ್ 4, 9, 12ರಂದು ನಡೆಯಲಿವೆ. ವಿಶ್ವಕಪ್​ನ ಕೊನೆಯ ಲೀಗ್​ ಪಂದ್ಯ ಕೂಡ ಬೆಂಗಳೂರಿನಲ್ಲೇ ನಡೆಯಲಿದೆ. ಕ್ರಿಕೆಟ್​ ಪ್ರೇಮಿಗಳು ಪಂದ್ಯವನ್ನು ವೀಕ್ಷಿಸಿದ ಬಳಿಕ ತಮ್ಮ ನಿವಾಸಕ್ಕೆ ತೆರಳಲು ಕಷ್ಟಕರ ಆಗಬಾರದೆಂದು ಮೆಟ್ರೋ ಸೇವೆ ಅವಧಿ ವಿಸ್ತರಣೆ ಮಾಡಿದ್ದು, ಬೆಂಗಳೂರಿನ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ನ ಎಲ್ಲಾ 5 ದಿನಗಳು ಈ ರಿಯಾಯಿತಿ ಚಾಲ್ತಿಯಲ್ಲಿರುತ್ತದೆ. ಬಿಎಂಆರ್’ಸಿಎಲ್ ಎಲ್ಲಾ ಇತರ ಮೆಟ್ರೋ ನಿಲ್ದಾಣಗಳಿಗೆ ಕಬ್ಬನ್ ಪಾರ್ಕ್ ಮೆಟ್ರೋ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ 50 ರೂ. ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ನೀಡಲಾಗುತ್ತದೆ.

ಸಂಜೆ 4 ಗಂಟೆಯಿಂದಲೇ ಟಿಕೆಟ್ ಗಳು ಮಾರಾಟವಾಗುತ್ತಿದೆ. QR ಕೋಡ್ ಸಹಿತ ಪೇಪರ್ ಟಿಕೆಟ್’ಗಳು ಸ್ಮಾರ್ಟ್ ಕಾರ್ಡ್‌ಗಳನ್ನು ಪ್ರಯಾಣಕ್ಕೆ ಅನುಮತಿಸಲಾಗಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023ನ ಬೆಂಗಳೂರಿನಲ್ಲಿ ನಡೆಯಲಿರುವ ಎಲ್ಲ ಐದು ಪಂದ್ಯಗಳಿಗೂ ಈ ರಿಯಾಯಿತಿ ಅನ್ವಯವಾಗಲಿದೆ ಎಂದು ಎಂದು ಬಿಎಂಆರ್’ಸಿಎಲ್ ಘೋಷಣೆ ಮಾಡಿದೆ.