ಸಂಪೂರ್ಣ ದೇಶದ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಲ್ಲೇ ಉಳಿಯಬೇಕಾಗಿದೆ. ಇದರಿಂದ ಅನೇಕರಿಗೆ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್ ಗಳಿಗೆ ಹೋಗುವುದು ಅಸಾಧ್ಯ. ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಮನೆಯಲ್ಲಿ ಇದ್ದುಕೊಂಡೇ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡು, ಕೆಲವು ಸರಳವಾದ ಟಿಪ್ಸ್ ಗಳನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾರೆ. ನಿನ್ನೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಒಬ್ಬರು ಈ ಸಮಯದಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಯನ್ನು ಕೇಳಿದ್ದರು.ಆದ ಕಾರಣ ಪ್ರಧಾನಿ ಮೋದಿಯವರು ನಾನೊಂದು ವಿಡಿಯೋ ಶೇರ್ ಮಾಡುತ್ತಿದ್ದು, ನೀವು ಕೂಡಾ ನಿಯಮಿತವಾಗಿ ಯೋಗಾಭ್ಯಾಸ ವನ್ನು ರೂಢಿಸಿಕೊಳ್ಳುವಿರಿ ಎಂದು ಹೇಳಿದ್ದು, ಅದರ ಜೊತೆಗೆ ಅವರು ಯೋಗ ಮಾಡುತ್ತಿರುವ ಒಂದು ಆನಿಮೇಟೆಡ್‌ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ನಾನು ಫಿಟ್ನೆಸ್ ಎಕ್ಸ್ಪರ್ಟ್ ಆಗಲೀ, ವೈದ್ಯಕೀಯ ತಜ್ಞನಾಗಲೀ ಅಲ್ಲ. ಯೋಗಭ್ಯಾಸ ಹಲವಾರು ವರ್ಷಗಳಿಂದ ನನ್ನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ ಅವರು ಈ ಯೋಗಾಭ್ಯಾಸದಿಂದ ತನಗೆ ಉಪಯೋಗವಾಗಿದೆಯೆಂದೂ, ನಿಮ್ಮಲ್ಲಿ ಹಲವರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಇನ್ನೂ ಬೇರೆ ಬೇರೆ ಮಾರ್ಗಗಳು ತಿಳಿದಿರಬಹುದು. ಅದನ್ನು ಇತರರೊಡನೆ ಹಂಚಿಕೊಳ್ಳಿ ಎಂದು ಕೂಡಾ ಹೇಳಿದ್ದಾರೆ. ಮೋದಿಯವರು ಈ ಫಿಟ್ನೆಸ್ ಬಗೆಗಿನ ವಿಡಿಯೋ ಜನರ ಗಮನ ಸೆಳೆದಿದ್ದು, ಅನೇಕರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.‌ ಫಿಟ್ನೆಸ್ ಬಗ್ಗೆ ಕಾಳಜಿ ಇರುವವರು ಒಮ್ಮೆ ನೋಡಬೇಕೆನ್ನುತ್ತಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here