ಫುಡ್ ಡೆಲಿವರಿ ಜೊತೆ ಮಾದಕ ವಸ್ತು ಮಾರಾಟ – ಮಂಗಳೂರು ಮೂಲದ ಯುವಕ ಸೆರೆ
![](https://suddimane.com/wp-content/uploads/2023/09/WhatsApp-Image-2023-09-06-at-3.22.36-PM-1.jpeg)
ಬೆಂಗಳೂರು: ಫುಡ್ ಡೆಲಿವರಿ ಜೊತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಯುವಕ ಮಂಗಳೂರು ಮೂಲದ ಅಬ್ದುಲ್ ಸಲಾಂನನ್ನು ಪೊಲೀಸರು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ
ಈತನಿಂದ 1.50 ಲಕ್ಷ ರೂ. ಮೌಲ್ಯದ 55 ಗ್ರಾಂ ಎಂಡಿಎಂಎ ಮಾದಕ ವಸ್ತು ಮತ್ತು ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಇತ್ತೀಚೆಗೆ ಆರೋಪಿ ಎಂಆರ್ ಸಿ ಆರ್ ಲೇಔಟ್ ಬಳಿ ಮಾದಕ ವಸ್ತು ಎಂಡಿಎಂ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ. ಈತ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.