Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಫ್ಯಾಷನ್​ಗಾಗಿ ಹುಲಿ ಉಗುರು ಬಳಕೆ ಸರಿಯಲ್ಲ, ತಪ್ಪಿಸ್ಥರ ವಿರುದ್ದ ಸೂಕ್ತ ಕ್ರಮ- ಬಿ.ಕೆ ಹರಿಪ್ರಸಾದ್‌

ಚಿತ್ರದುರ್ಗ: ಫ್ಯಾಷನ್​ಗಾಗಿ ಹುಲಿ ಉಗುರು, ಇತರೆ ವಸ್ತು ಬಳಕೆ ಸರಿಯಲ್ಲ ಕಾಂಗ್ರೆಸ್​​ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ ​ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೇ ಆಗಿರಲಿ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಆಗಬೇಕು.ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಪ್ರಧಾನಮಂತ್ರಿ ಕೂಡ ನವಿಲು ಗರಿ ಧರಿಸಿದ್ದರು. ನವಿಲು ಸಾಕಿದ್ದ ಪ್ರಧಾನಮಂತ್ರಿ ಹಿಡಿದುಕೊಂಡು ಹೋಗಬೇಕಾ. ನವಿಲುಗರಿ ನೈಸರ್ಗಿಕವಾಗಿ ಉದುರುತ್ತೆ, ಕೊಂದರೆ ಕ್ರಮ ಆಗಲಿ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ರಾಜಕೀಯದ ವಿಲನ್​ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಸಿಎಂ ವಕ್ತಾರ ಅಲ್ಲ, ಕುಮಾರಸ್ವಾಮಿ ಬೆಂಬಲಿಗನೂ ಅಲ್ಲ. ವಿಲನ್ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ನಿರಾಕರಿಸಿದರು.

ಬೆಂಗಳೂರು ಜಿಲ್ಲೆಗೆ ಕನಕಪುರ ಸೇರಿಸುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​​​ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಕೀಯ, ಆಡಳಿತಾತ್ಮಕವಾಗಿ ಜಿಲ್ಲೆಗಳ ರಚನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.