ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಮಂಗಳೂರಿನ ದಿಶಾ ಭಾಗಿ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಜು.14ರಂದು ಭಾಗವಹಿಸಲಿರುವ ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ (ಬ್ಯಾಸ್ಟಿಲ್ ಡೇ) ಕವಾಯತಿನಲ್ಲಿ ಭಾರತೀಯ ನೌಕಾಪಡೆ ತುಕಡಿಯ ಭಾಗವಾಗಿ ಮಂಗಳೂರು ಮೂಲದ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಪಾಲ್ಗೊಳ್ಳುವರು.
ಜು.14ರಂದು ನಡೆಯಲಿರುವ ಬಾಸ್ಟಿಲ್ ಪರೇಡ್ ನಲ್ಲಿ ಭಾಗವಹಿಸಲು ಈಗಾಗಲೇ ನೌಕಾಪಡೆಯ ನಾಲ್ವರು ಅಧಿಕಾರಿಗಳು ಹಾಗೂ ನಾಲ್ವರು ಅಧಿಕಾರಿಗಳು ಮತ್ತು 64 ನಾವಿಕರ ತಂಡ ಪ್ಯಾರಿಸ್ ತಲುಪಿದೆ. ಈ ನಾಲ್ವರು ಅಧಿಕಾರಿಗಳ ಪೈಕಿ ದಿಶಾಕೂಡ ಒಬ್ಬರು. ನೌಕಾ ತುಕಡಿಯನ್ನು ಕಮಾಂಡರ್ ವ್ರತ್ ಬಘೇಲ್ ಮುನ್ನಡೆಸಲಿದ್ದು, ಲೆ. ಕಮಾಂಡರ್ ದಿಶಾ, ಲೆ. ಕಮಾಂಡರ್ ರಜತ್ ತ್ರಿಪಾಠಿ, ಲೆ. ಕಮಾಂಡರ್ ಜಿತಿನ್ ಲಲಿತಾ, ಲಲಿತಾ ಧರ್ಮರಾಜ್ ತುಕಡಿಯನ್ನು ಮುನ್ನಡೆಸಲಿದ್ದಾರೆ.