Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಂದ್‌ನ ಭದ್ರತೆಗೆ ನಿಯೋಜನೆಗೊಂಡ ಪೊಲೀಸರಿಗೆ ತಂದ ಉಪಹಾರದಲ್ಲಿತ್ತು ಸತ್ತ ಇಲಿ!

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಹಲವು ಸಂಘಸಂಸ್ಥೆಗಳು ಸೇರಿ ಬೆಂಗಳೂರು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನಕಾರನ್ನು ನಿಯಂತ್ರಿಸಲು ರಾಜ್ಯ ರಾಜಧಾನಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇನ್ನು ​ಪ್ರತಿಭಟನೆಯ ಭದ್ರತೆಗೆ ನಿಯೋಜನೆ ಮಾಡಿದ ಪೊಲೀಸರಿಗೆ ಇಲಾಖೆ ವತಿಯಿಂದ ಹೋಟೆಲ್‌ನಿಂದ ಬೆಳಗ್ಗಿನ ಉಪಹಾರ ಸರಬರಾಜು ಮಾಡಲಾಯಿತ್ತು. ಆದರೆ ಆ ಉಪಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಪೊಲೀಸರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳವಾರ ಬೆಳಗ್ಗೆ ಯಾರ್ಡ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಯಶವಂತಪುರ ಟ್ರಾಫಿಕ್ ಪೊಲೀಸರಿಗೆ ತಂದಿದ್ದ ರೈಸ್​ ಬಾತ್​ನ ಪ್ಯಾಕೆಟ್‌ ತರೆದಾಗ ಅದರಲ್ಲಿ ಸತ್ತ ಇಲಿ ಕಂಡುಬಂದಿದೆ. ಅದನ್ನು ನೋಡಿ ಪೊಲೀಸ್‌ ಸಿಬ್ಬಂದಿ ಕೋಪಗೊಂಡಿದ್ದಾರೆ. ಇಂತಹ ಊಟ ತಿಂದು ಹೆಚ್ಚು ಕಡಿಮೆಯಾದ್ರೆ ಯಾರು ಹೊಣೆ ಎಂದು ಕಿಡಿಕಾರಿದ್ದಾರೆ.

ಇನ್ನು ಖಾಸಗಿ ಹೋಟೆಲ್ ನಿಂದ ಕಳಪೆ ಮಟ್ಟದ ಊಟ ಪೂರೈಕೆ ಮಾಡಲಾಗಿದೆ ಎಂಬ ಆರೋಪಿಸಲಾಗಿದೆ. ಊಟ ಸರಬರಾಜು ಮಾಡಿದ ಹೋಟೆಲ್ ಯಾವುದು ಅನ್ನುವ ಬಗ್ಗೆ ಮಾಹಿತಿಲ್ಲ. ಈ ರೀತಿಯ ಊಟ ಸರಬರಾಜು ಮಾಡಿರುವ ಹೊಟೇಲ್‌ ವಿರುದ್ದ ಸೂಕ್ತ ಕ್ರಮಕೈಗೊಳ್ಳುತ್ತಾರಾ ಎನ್ನುವುದನ್ಜು ನೋಡಬೇಕಿದೆ.