ಬಚ್ಚನ್ ಮನೆಯಿಂದ ಹೊರ ಬಂದ ಐಶ್ವರ್ಯಾ ರೈ – ಗಾಸಿಪ್ ಸುದ್ದಿ ನಿಜವಾಯ್ತಾ…?
ಮುಂಬೈ : ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ನಡೆಯುತ್ತಿರುವ ಬಿರುಕಿನ ಸುದ್ದಿಯ ಗಾಸಿಪ್ ಇದೀಗ ನಿಜವಾಗುತ್ತಿದೆ ಎಂದು ಹೇಳಲಾಗಿದ್ದು. ಬಚ್ಚನ್ ಮನೆಯಿಂದ ಐಶ್ವರ್ಯಾ ಬಚ್ಚನ್ ತಮ್ಮ ಮಗಳೊಂದಿಗೆ ಹೊರ ಬಂದಿದ್ದಾರೆ ಎಂದು ಸುದ್ದಿಯಾಗಿದೆ.
ಜೂಮ್ ವೆಬ್ ಸೈಟ್ ವರದಿ ಪ್ರಕಾರ ಐಶ್ವರ್ಯಾ ರೈ ತನ್ನ ಮಗಳು ಆರಾಧ್ಯ ಬಚ್ಚನ್ ನೊಂದಿಗೆ ಬಚ್ಚನ್ ಮನೆ ಜಲ್ಸಾದಿಂದ ಹೊರಗೆ ಬಂದಿದ್ದಾರೆ. ಇದೀಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಟೈಮ್ಸ್ ನೌ ವರದಿಯ ಪ್ರಕಾರ, ಐಶ್ವರ್ಯಾ ಮತ್ತು ಅವರ ಅತ್ತೆ ಜಯಾ ಬಚ್ಚನ್ ಕಳೆದ ಕೆಲವು ವರ್ಷಗಳಿಂದ ಯಾವುದೇ ರೀತಿಯ ಮಾತುಕತೆ ಇಲ್ಲದೆ ದೂರವಿದ್ದಾರೆ.ಆದರೆ ಅಭಿಷೇಕ್ ತನ್ನ ಹೆತ್ತವರಿಗೆ ನಿಷ್ಠೆ ಮತ್ತು ತನ್ನ ಹೆಂಡತಿ ಮತ್ತು ಮಗಳ ಬಗೆಗಿನ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಈ ನಡುವೆ ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಬಚ್ಚನ್ ಗಂಡನಿಂದ ದೂರವಾಗಿ ಇದೀಗ ಅಮಿತಾಬ್ ಬಚ್ಚನ್ ಮನೆಗೆ ಬಂದಿದ್ದು, ಈ ಗಲಾಟೆ ಮತ್ತಷ್ಟು ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ. ಮಾಹಿತಿ ಪ್ರಕಾರ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹ ವಿಚ್ಚೇದನ ಪಡೆಯುವ ಸಾಧ್ಯತೆಗಳು ತುಂಬಾ ಕಡಿಮೆ ಇದೆ. ಆದರೆ ಐಶ್ವರ್ಯಾ ಮಾತ್ರ ತನ್ನ ಮಗಳೊಂದಿಗೆ ಬಚ್ಚನ್ ಪ್ಯಾಮಿಲಿಯಿಂದ ದೂರ ಉಳಿಯಲಿದ್ದಾರೆ.