ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡ ನಟಿ ಸೋನಂ ಕಪೂರ್ – ಪೋಟೊ ವೈರಲ್
ಬಾಲಿವುಡ್ ನಲ್ಲಿ ಅತ್ಯಂತ ಹೆಸರಾಂತ ನಟಿಯಾಗಿ ಸೈ ಎಂದೆನಿಸಿಕೊಂಡಿರುವ ನಟಿ ಸೋನಂ ಕಪೂರ್ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದು, ಅವರ ಫಾಲೋವರ್ಸ್ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಸೋನಮ್ ಕಪೂರ್ರವರು ಬರೋಬ್ಬರಿ ಇಪ್ಪತ್ತು ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಮೂಲಕ ಮತ್ತೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಕುರಿತು ಸುಳಿವು ನೀಡಿದ್ದಾರೆ.
ನಟಿ ಸೋನಮ್ ಕಪೂರ್ ಅವರಿಗೆ ಗರ್ಭಾವಸ್ಥೆಯ ನಂತರ ತೂಕ ಏರಿಕೆಯಾಗಿತ್ತು. ನಟಿ ಆಗಸ್ಟ್ 2022 ರಲ್ಲಿ ಮಗ ವಾಯುವಿಗೆ ಜನ್ಮ ನೀಡಿದರು. ಮಗು ಜನನದ ಬಳಿಕ ತೂಕ ವಿಪರೀತವಾಗಿ ಏರಿಕೆಯಾಗಿತ್ತು. ತೂಕ ಇಳಿಸಲು ಸಾಕಷ್ಟು ಶ್ರಮ ಪಡುತ್ತಿದ್ದ ಇವರು, ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವರ್ಕೌಟ್ ವಿಡಿಯೋ ಹಾಕಿದ್ದಾರೆ.
ಇವರು ‘ಸಾವರಿಯಾ’ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ನಟಿ ಸೋನಂ ಕಪೂರ್ ಅವರು ‘ಐ ಹೇಟ್ ಲವ್ ಸ್ಟೋರಿ’ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ನಟಿ ಸೋನಮ್ ಕಪೂರ್ ಉದ್ಯಮಿ ಆನಂದ್ ಅಹುಜಾ ಅವರನ್ನು ಮೇ 2018 ರಲ್ಲಿ ವಿವಾಹವಾದರು. ಅವರು ಆಗಸ್ಟ್ 20, 2022 ರಂದು ಮೊದಲ ಮಗು ವಾಯುವಿಗೆ ಜನ್ಮ ನೀಡಿದರು. ಈ ವರ್ಷದ ಆರಂಭದಲ್ಲಿ ವಾಯುವಿಗೆ ಒಂದು ವರ್ಷವಾಗಿದ್ದು ಮೊದಲ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿತ್ತು.