ಬರ್ತ್ ಡೇ ಬಂದ್ರೆ ಭಯ ಅಂತ ನಟ ಯಶ್ ಹೇಳಿದ್ದು ಏಕೆ.?
ಗದಗ್: ಸೂರಣಗಿ ಗ್ರಾಮದಲ್ಲಿ ಕಟೌಟ್ ಕಟ್ಟುವಾಗ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಮೂವರು ಅಭಿಮಾನಿಗಳ ಕುಟುಂಬಸ್ಥರಿಗೆ ರಾಕಿಂಗ್ ಸ್ಟಾರ್ ಯಶ್ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೃತ ಫ್ಯಾನ್ಸ್ ಕುಟುಂಬಸ್ಥರಿಗೆ ಏನು ಅಗತ್ಯವಿದೆಯೋ ಅದನ್ನು ಮಾಡುವ ಭರವಸೆ ನೀಡಿದ್ದೇನೆ. ಎಲ್ಲವನ್ನೂ ಬಹಿರಂಗವಾಗಿ ಹೇಳಿದರೆ ದುರುಪಯೋಗವಾಗುತ್ತದೆ.
ಹಾಗೇ ಯಾಕಾದ್ರೂ ಬರ್ತ್ ಡೇ ಬರುತ್ತೋ ಅಂತ ಭಯವಾಗುತ್ತಿದೆ’ ಎಂದು ನಟ ಯಶ್ ಬೇಸರ ವ್ಯಕ್ತಪಡಿಸಿದ್ದಾರೆ. ಮೃತ ಅಭಿಮಾನಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿ, ‘ಬರ್ತ್ ಡೇ ಅಂದರೆ ಅಸಹ್ಯ ಬಂದಿದೆ’ ಎಂದಿದ್ದಾರೆ. ‘
ಬ್ಯಾನರ್ ಕಟ್ಟೋದನ್ನು ನಾನು ಇಷ್ಟಪಡಲ್ಲ, ಫ್ಯಾನ್ಸ್ ಗೆ ಹೇಳಿದ್ರೂ ಬೇಜಾರ್ ಆಗ್ತಾರೆ. ನಮ್ಮಿಂದ ಯಾರಿಗೂ ತೊಂದರೆ ಆಗಬಾರದು ಅನ್ನೋದು ನಮ್ಮ ಆಸೆ. ಫ್ಯಾನ್ಸ್ ಬೆಳೆಯಬೇಕು ಅಂತ ಆಸೆ, ಅಭಿಮಾನಿಗಳ ಪ್ರೀತಿಗೆ ನಾನು ಋಣಿ’ ಎಂದು ಪ್ರತಿಕ್ರಿಯಿಸಿದ್ದಾರೆ.