ಬಾಯ್ ಫ್ರೆಂಡ್ ಮೊಬೈಲ್ನಲ್ಲಿತ್ತು 13,000 ಅಶ್ಲೀಲ ಪೋಟೋ.! – ಯುವತಿ ಮಾಡಿದ್ದೇನು?
ಬೆಂಗಳೂರು: ಬಿಪಿಒ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ 25 ವರ್ಷದ ಯುವಕನ ಮೊಬೈಲ್ ಗ್ಯಾಲರಿಯಲ್ಲಿ ತನ್ನ ಸಹೋದ್ಯೋಗಿಗಳು ಸೇರಿದಂತೆ ವಿವಿಧ ಮಹಿಳೆಯರ ಸುಮಾರು 13,000 ನಗ್ನ ಫೋಟೋಗಳಿದ್ದು, ಈತನ ವಿರುದ್ದ ಇದೀಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಬೆಳ್ಳಂದೂರಿನಲ್ಲಿರುವ ಬಿಪಿಒ ಸಂಸ್ಥೆಯ ಉದ್ಯೋಗಿ ಆದಿತ್ಯ ಸಂತೋಷ್ (25) ಎಂದು ಗುರುತಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಆರೋಪಿ ಆದಿತ್ಯ ಸಂತೋಷ್, ಸಹೋದ್ಯೋಗಿಯಾಗಿದ್ದ ೨೨ಯ ಹರೆಯದ ಯುವತಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಕಳೆದ ನಾಲ್ಕು ತಿಂಗಳಲ್ಲಿ ಈತನೊಂದಿಗೆ ಪ್ರೀತಿಗೆ ಬಿದ್ದಿದ್ದ ಯುವತಿ ಕಚೇರಿಯಲ್ಲಿದ್ದಾಗ, ತನ್ನ ಬಾಯ್ ಪ್ರೆಂಡ್ ಪೋನ್ ಪರಿಶೀಲನೆ ಮಾಡಿದಾಗ ಆಕೆ ಬೆಚ್ಚಿಬಿದ್ದಿದ್ದಳು. ಆತನ ಪೋನಿನಲ್ಲಿ ಆಕೆಯ ಮತ್ತು ಇತರ ಕೆಲವು ಸಹೋದ್ಯೋಗಿಗಳು ಸೇರಿದಂತೆ ವಿವಿಧ ಮಹಿಳೆಯರ ಸುಮಾರು 13,000 ನಗ್ನ ಫೋಟೋಗಳಿತ್ತು. ತಕ್ಷಣ ಆತನೊಂದಿಗಿದ್ದ ಸಂಬಂಧ ಕಡಿದುಕೊಂಡ ಆಕೆ ನ. 20 ರಂದು ತನ್ನ ಸಹೋದ್ಯೋಗಿಗಳನ್ನು ಭವಿಷ್ಯದಲ್ಲಿ ತೊಂದರೆಯಿಂದ ರಕ್ಷಿಸಲು ಕ್ರಮ ಕೈಗೊಳ್ಳುವಂತೆ ಕಚೇರಿಯಲ್ಲಿ ತನ್ನ ಹಿರಿಯ ಸಹೋದ್ಯೋಗಿಗಳನ್ನು ಒಟ್ಟುಗೂಡಿಸಿ ಚರ್ಚಿಸಿದ್ದಾಳೆ.
ತಕ್ಷಣ ಎಚ್ಚೆತ್ತುಕೊಂಡ ಬೆಳ್ಳಂದೂರಿನಲ್ಲಿರುವ ಬಿಪಿಒ ಸಂಸ್ಥೆಯ ಕಾನೂನು ಮುಖ್ಯಸ್ಥೆ, ಅರೋಪಿ ಆದಿತ್ಯ ಸಂತೋಷ್ ವಿರುದ್ಧ ನ. 23 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯುವತಿ ಹಾಗೂ ಆದಿತ್ಯ ನಾಲ್ಕು ತಿಂಗಳ ಕಾಲ ಸಂಬಂಧ ಹೊಂದಿದ್ದು, ತಮ್ಮ ಆತ್ಮೀಯ ಕ್ಷಣಗಳನ್ನು ದಾಖಲಿಸಿಕೊಂಡಿದ್ದರು ಎನ್ನಲಾಗಿದೆ. ಯುವತಿ ಅವುಗಳನ್ನು ಡಿಲೀಟ್ ಮಾಡಲಿ ಬಯಸಿ, ಆತನಿಗೆ ತಿಳಿಯದಂತೆ ಫೋನ್ ತೆಗೆದುಕೊಂಡ ಬಾಯ್ ಪ್ರೆಂಡ್ ಅಸಲಿಯತ್ತು ಬಯಲಾಗಿ ಬಂದಿದೆ.