Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಾಲಿವುಡ್ ನಟ ದಲೀಪ್ ಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌

ಮಹಾರಾಷ್ಟ್ರ: ಬಾಜಿಗರ್,ಬಾಗ್ ಮಿಲ್ಕಾ ಬಾಗ್ ಸೇರಿದಂತೆ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ನಟ ದಲೀಪ್ ತಾಹೀಲ್‍ ಗೆ ಬಾಂದ್ರಾದ ಅಡಿಷನಲ್ ಚೀಫ್‍ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಜೈಲು ಶಿಕ್ಷೆ ಹಾಗೂ ದಂಡವನ್ನೂ ಪ್ರಕಟಿಸಿದೆ.

ಈ ಕುರಿತಂತೆ ಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡುವುದಾಗಿ ನಟ  ಹೇಳಿದ್ದಾರೆ.2018ರಲ್ಲಿ ನಡೆದ ಡ್ರಿಂಕ್‌ ಅಂಡ್ ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಲೀಪ್ ಅವರಿಗೆ ಎರಡು ತಿಂಗಳು ಜೈಲು ಮತ್ತು ಐದು ನೂರು ರೂಪಾಯಿ ದಂಡ ವಿಧಿಸಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಗೆ ಐದು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ.

ದಲೀಪ್ ವಿರುದ್ಧ 2018ರಲ್ಲಿ ಹಿಟ್ ಅಂಡ್ ರನ್ ಕೇಸು ದಾಖಲಾಗಿತ್ತು. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದ ನಟ ಆಟೋವೊಂದಕ್ಕೆ ಡಿಕ್ಕಿ ಹೊಡೆದು ಮಹಿಳೆಗೆ ಯನ್ನು ಗಾಯಗೊಳಿಸಿದ್ದರು ಎಂದು ದೂರು ದಾಖಲಾಗಿತ್ತು. ನಟ ಮದ್ಯ ಸೇವೆ ಮಾಡಿರೋದು ಸಾಬೀತಾಗಿದ್ದು, ಇದೆಲ್ಲವನ್ನೂ ಪರಿಶೀಲಿಸಿದ ಮಾನ್ಯ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ.