Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಾಹ್ಯಾಕಾಶದಿಂದ ಭೂಮಿ, ಚಂದ್ರನ ಸಹಿತ ಸೆಲ್ಫಿಕಳುಹಿಸಿದ ಆದಿತ್ಯ-ಎಲ್‌ 1

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯು ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಿರುವ ಆದಿತ್ಯ-ಎಲ್‌ 1 ಬಾಹ್ಯಾಕಾಶ ನೌಕೆ ಬಾಹ್ಯಾಕಾಶದಿಂದ ಸೆಲ್ಫಿ ಹಂಚಿಕೊಂಡಿದ್ದು ಇದು ಭೂಮಿ, ಚಂದ್ರನನ್ನು ಸೆರೆಹಿಡಿದಿದೆ.

ಈ ಕುರಿತು ಇಸ್ರೋ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು ಲ್ಯಾಗ್ರೇಂಜ್ ಪಾಯಿಂಟ್ 1 ಗೆ ಪ್ರಯಾಣಿಸುವ ಮೊದಲು ಗ್ರಹದ ಸುತ್ತಲೂ ಸುತ್ತುತ್ತಿರುವಾಗ ಸೆಲ್ಫಿಯೊಂದಿಗೆ ಭೂಮಿ ಮತ್ತು ಸೂರ್ಯನನ್ನು ಸೆರೆಹಿಡಿದಿದೆ.

ಭಾರತದ ಮೊದಲ ಸೌರ ಬಾಹ್ಯಾಕಾಶ ವೀಕ್ಷಣಾಲಯ ಮಿಷನ್ ಆದಿತ್ಯ-ಎಲ್ 1 ಭೂಮಿಯಿಂದ ಯಶಸ್ವಿಯಾಗಿ ಪ್ರಯಾಣ ಆರಂಭಿಸಿದ್ದು ನಾಲ್ಕು ತಿಂಗಳುಗಳ ಬಳಿಕ ತನ್ನ ನಿಗದಿತ ಕಕ್ಷೆಗೆ ತಲುಪಲಿದೆ. ಸೂರ್ಯ ನಿಂದ 148.5 ಮಿಲಿಯನ್ ಕಿಲೋ ಮೀಟರ್​ ಮತ್ತು ಭೂಮಿಯಿಂದ 15 ಲಕ್ಷ ಕಿಲೋ ಮೀಟರ್​ ದೂರದಲ್ಲಿರುವ L1ಪಾಯಿಂಟ್ ತಲುಪಲು ಈ ನೌಕೆಗೆ ಇನ್ನು ನಾಲ್ಕು ತಿಂಗಳುಗಳ ಕಾಲ ಬೇಕು.