Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಿಎಂಟಿಸಿ ಬಸ್ ಹರಿದು ಇಂಜಿನಿಯರ್ ವಿದ್ಯಾರ್ಥಿ ಮೃತ್ಯು – 10 ದಿನಗಳಲ್ಲಿ ಮೂರನೇ ಬಲಿ

ಬೆಂಗಳೂರು: ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು ಇಂಜಿನಿಯರ್ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕಳೆದ 10 ದಿನಗಳಲ್ಲಿ ಬಿಎಂಟಿಸಿ ಬಸ್​ ಅಪಘಾತದಲ್ಲಿ ಮೂರನೇ ಬಲಿ ಇದಾಗಿದೆ. ಗಂಗಾಧರ್ (21) ಮೃತ ವಿದ್ಯಾರ್ಥಿ.

ಇಂಟರ್ನಿಶಿಫ್ ಸರ್ಟಿಫಿಕೇಟ್ ತರಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಗಂಗಾಧರ್​ಗೆ ಹೂವಿನ ಮಾರ್ಕೆಟ್ ಸಮೀಪ ಹಿಂಬಂದಿಯಿಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಗಂಗಾಧರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಯಶವಂತಪುರ ಸಂಚಾರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.