Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಿಎಸ್ಎನ್ಎಲ್ ನ ದತ್ತಾಂಶ ಕದ್ದ ಸೈಬರ್ ಕಳ್ಳರು

ನವದೆಹಲಿ:ದಿನದಿಂದ ದಿನಕ್ಕೆ ಸೈಬರ್ ಕಳ್ಳರ ಹಾವಳಿ ಜಾಸ್ತಿ ಆಗುತ್ತಿದೆ.ಇವರ ಈ ಹಾವಳಿ ಎಲ್ಲಿಯವರೆ ಮುಟ್ಟಿದೆ ಅಂದ್ರೆ ಇದೀಗ ಸರಕಾರಿ ಸ್ವಾಮ್ಯದ ಟೆಲಿಕಾಮ್ ಅಪರೇಟರ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ದತ್ತಾಂಶವನ್ನು ಸೈಬರ್ ಖದೀಮರು ಕಳವು ಮಾಡಿದ್ದಾರೆ.

ಇದು ಗಂಭೀರವಾದ ಆರೋಪವಾಗಿದ್ದು ಲಕ್ಷಾಂತರ ಬಿಎಸ್ ಎನ್ ಎಲ್ ಗ್ರಾಹಕರ ದತ್ತಾಂಶಗಳು ಸೋರಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.

ಡಾರ್ಕ್ ವೆಬ್ ಫೋರಂ ನಲ್ಲಿ ’ಪೆರಲ್’ಎಂಬ ಹೆಸರಿನಲ್ಲಿ ಸೈಬರ್ ಕಳ್ಳರು ಬಿಎಸ್ಎನ್ ಎಲ್ ದತ್ತಾಂಶದ ಸ್ಯಾಂಪಲ್ ಅನ್ನು ಪ್ರದರ್ಶನ ಮಾಡಿದ್ದಾರೆ. ಈ ಸ್ಯಾಂಪಲ್ ಸುಮಾರು 32,000 ಮಂದಿ ಗ್ರಾಹಕರ ದತ್ತಾಂಶ ಒಳಗೊಂಡಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ಸೈಬರ್ ಕಳ್ಳರು ತಮ್ಮ ಬಳಿ 29 ಲಕ್ಷಕ್ಕೂ ಅಧಿಕ ಮಂದಿ ಗ್ರಾಹಕರ ದತ್ತಾಂಶ ಲಭ್ಯವಿದೆ ಎಂಬ ಭಯಾನಕ ಮಾಹಿತಿಯನ್ನು ಸೈಬರ್ ಕಳ್ಳರು ಹೊರಹಾಕಿದ್ದಾರೆ. ಇದು ಬಿಎಸ್ಎನ್ಎಲ್ ಗ್ರಾಹಕರ ಗೌಪ್ಯತೆ ಮತ್ತು ಭದ್ರತೆಯ ಮೇಲಿನ ಬೆದರಿಕೆಯಾಗಿದೆ ಎಂದು ಗ್ರಾಹಕರು ತಮ್ಮ ಆತಂಕವನ್ನು ಹೊರಹಾಕಿದ್ದಾರೆ.